Wednesday, June 26, 2024
Homeಕರಾವಳಿಉಡುಪಿದಕ್ಷಿಣಕನ್ನಡದಲ್ಲಿಂದು 119 ಮಂದಿಗೆ ಕೊರೊನಾ ಪಾಸಿಟಿವ್, ಒಂದೇ ದಿನ 9 ಮಂದಿ ಕೋವಿಡ್ ನಿಂದ ಸಾವು,...

ದಕ್ಷಿಣಕನ್ನಡದಲ್ಲಿಂದು 119 ಮಂದಿಗೆ ಕೊರೊನಾ ಪಾಸಿಟಿವ್, ಒಂದೇ ದಿನ 9 ಮಂದಿ ಕೋವಿಡ್ ನಿಂದ ಸಾವು, ಉಡುಪಿಯಲ್ಲಿ 225 ಜನರಿಗೆ ಸೋಂಕು

spot_img
- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 119 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಅಲ್ಲದೇ ಒಂದೇ 9 ಮಂದಿಯನ್ನು ಕೊರೊನಾ ಎಂಬ ನರ ರಾಕ್ಷಸ ತನಗೆ ಬಲಿಯಾಗಿಸಿಕೊಂಡಿದೆ. ಇನ್ನು ಜಿಲ್ಲೆಯಲ್ಲಿ ಇದುವರೆಗೆ4925 ಕೊರೊನಾ ಪ್ರಕರಣಗಳು ವರದಿಯಾಗಿವೆ. ಹಾಗೇ ಇದುವರೆಗೂ 2138 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, ಇಂದು 80 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2672 ಸಕ್ರೀಯ ಕೋವಿಡ್ ಪ್ರಕರಣಗಳಿವೆ. ಇದುವರೆಗೂ 113 ಮಂದಿ ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ ಸಾವನ್ನಪ್ಪಿದ್ದಾರೆ.

ಇನ್ನು ಉಡುಪಿಯಲ್ಲಿ ಇಂದು ಬರೋಬ್ಬರಿ 225 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಆ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3612ಕ್ಕೆ ಏರಿಕೆಯಾಗಿದೆ. ಇದುವರೆಗೂ 2173 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದು, ಸದ್ಯ ಜಿಲ್ಲೆಯಲ್ಲಿ 1425 ಕೊರೊನಾ ಪಾಸಿಟಿವ್ ಪ್ರಕರಣಗಳಿವೆ. ಇನ್ನು ಇಂದು 51 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೇ ಒಟ್ಟು 14 ಮಂದಿ ಇದುವರೆಗೂ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ.

- Advertisement -
spot_img

Latest News

error: Content is protected !!