Tuesday, July 21, 2026
Homeಕರಾವಳಿಮಂಗಳೂರು: ಬಾಲಕಿಗೆ ಮತ್ತು ಬರುವ ಮಾತ್ರೆ ನೀಡಿ ಅತ್ಯಾಚಾರಗೈದ ಪ್ರಕರಣ: ಆರೋಪಿಗೆ 10 ವರ್ಷ ಕಠಿಣ...

ಮಂಗಳೂರು: ಬಾಲಕಿಗೆ ಮತ್ತು ಬರುವ ಮಾತ್ರೆ ನೀಡಿ ಅತ್ಯಾಚಾರಗೈದ ಪ್ರಕರಣ: ಆರೋಪಿಗೆ 10 ವರ್ಷ ಕಠಿಣ ಸಜೆ ಹಾಗೂ 50,000 ದಂಡ ವಿಧಿಸಿದ ನ್ಯಾಯಾಲಯ

- Advertisement -
- Advertisement -

ಮಂಗಳೂರು:  ಬಾಲಕಿಗೆ ಮತ್ತು ಬರುವ ಮಾತ್ರೆ ನೀಡಿ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ಮಂಗಳೂರಿನ ನ್ಯಾಯಾಲಯ 10 ವರ್ಷ ಕಠಿಣ ಸಜೆ ಹಾಗೂ 50,000 ದಂಡ ವಿಧಿಸಿ ತೀರ್ಪು ನೀಡಿದೆ.

ಮಂಗಳೂರು ಕಂದಾವರ ನಿವಾಸಿ ಅಬ್ದುಲ್ ಲತೀಫ್ (45) ಶಿಕ್ಷೆಗೆ ಒಳಗಾದ ಆರೋಪಿ. ಕೈಕಂಬದಲ್ಲಿ ಬಟ್ಟೆ ಅಂಗಡಿಯನ್ನು ಅಬ್ದುಲ್ ಲತೀಫ್ ಅಂಗಡಿಗೆ ಕೆಲಸಕ್ಕೆಂದು ಬರುತ್ತಿದ್ದ ಬಾಲಕಿಗೆ 2017ರಲ್ಲಿ ಜ್ಯೂಸ್ ನಲ್ಲಿ ಮತ್ತು ಬರುವ ಮಾತ್ರೆ ಹಾಕಿ ಕೊಟ್ಟು ರೇಪ್ ಮಾಡಿದ್ದ. ಬಳಿಕ ಬಾಲಕಿಗೆ ರೇಪ್ ನ‌ ವಿಡಿಯೋ ಮಾಡಿ ಮತ್ತೆ ಮತ್ತೆ ತೋರಿಸಿ, ಬೆದರಿಸಿ ರೇಪ್ ಮಾಡಿದ್ದ. ಇದರಿಂದ‌ ಬಾಲಕಿ‌ ಗರ್ಭಿಣಿಯಾಗಿದ್ದಳು.

ಈ ಬಗ್ಗೆ ಬಜ್ಪೆ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಕುರಿತ ಸುದೀರ್ಘ ವಿಚಾರಣೆ ಬಳಿಕ ಇದೀಗ ಅಬ್ದುಲ್ ಲತೀಫ್ ತಪ್ಪಿತಸ್ಥ ಎಂದು ನ್ಯಾಯಾಲಯ ‌ಆತನಿಗೆ 10 ವರ್ಷ ಜೈಲು, 50,000 ದಂಡ ವಿಧಿಸಿದೆ.

- Advertisement -

Latest News

error: Content is protected !!