Monday, May 6, 2024
Homeತಾಜಾ ಸುದ್ದಿವಯನಾಡಿನಲ್ಲಿ ಬಹಿರಂಗವಾಗಿ ನಕ್ಸಲರ ತಂಡ ಪತ್ತೆ; ಗ್ರಾಮಸ್ಥರಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಕರೆ..!

ವಯನಾಡಿನಲ್ಲಿ ಬಹಿರಂಗವಾಗಿ ನಕ್ಸಲರ ತಂಡ ಪತ್ತೆ; ಗ್ರಾಮಸ್ಥರಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಕರೆ..!

spot_img
- Advertisement -
- Advertisement -

ಕೇರಳ: ವಯನಾಡು ಜಿಲ್ಲೆಯ ಕಂಬಮಲೆ ಅರಣ್ಯ ಹಾಗೂ ಮಕ್ಕಿಮಲೆ ಅರಣ್ಯದಲ್ಲಿ ನಕ್ಸಲರಿದ್ದಾರೆ ಅನ್ನೋ ಅನುಮಾನ ಬಲವಾಗಿದ್ದು, ಕೇರಳದ ನಕ್ಸಲ್ ನಿಗ್ರಹ ತಂಡ ನಿರಂತರ ಕೂಂಬಿಂಗ್ ನಡೆಸಿತ್ತು. ನಕ್ಸಲರ ಸುಳಿವು ಪತ್ತೆಯಾಗದ ಕಾರಣ ಕೂಂಬಿಂಗ್ ಕಾರ್ಯಾಚರಣೆಯನ್ನು ನಂತರದಲ್ಲಿ ನಿಲ್ಲಿಸಲಾಗಿತ್ತು. ಆದರೆ ಲೋಕಸಭಾ ಚುನಾವಣೆ ವೇಳೆ ಮತ್ತೆ ನಕ್ಸಲರು ಗ್ರಾಮದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

ನಾಲ್ವರು ನಕ್ಸಲರ ತಂಡ ಗ್ರಾಮಕ್ಕೆ ಮಾವೋವಿಸ್ಟ್ ಜಿಂದಾಬಾದ್ ಎಂಬ ಘೋಷಣೆ ಕೂಗಿ ಎಂಟ್ರಿ ಕೊಟ್ಟಿದ್ದು ಚುನಾವಣೆಯನ್ನು ಬಹಿಷ್ಕಾರ ಮಾಡುವಂತೆ ಕರೆ ನೀಡಿದ್ದಾರೆ. 

ಅಷ್ಟೇಅಲ್ಲದೆ ಗ್ರಾಮಸ್ಥರ ಜೊತೆ ಮಾತನಾಡಿ, ಸರ್ಕಾರವು ಕಳೆದ ನಲುವತ್ತು ವರ್ಷದಿಂದ ಕಂಬಮಲೆ ಅರಣ್ಯ ತಪ್ಪಲಿನ ಜನರ ಸಮಸ್ಯೆಯನ್ನು ಹಾಗೂ ಇಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರ ಕಷ್ಟ ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಹೀಗಾಗಿ ಎಲ್ಲರೂ ಚುನಾವಣೆ ಬಹಿಷ್ಕಾರ ಮಾಡಿ ಎಂದು ಕರೆ ನೀಡಿದ್ದಾರೆ.

ಇನ್ನು ಸ್ಥಳೀಯರು ನೀಡಿದ ಮಾಹಿತಿಯಂತೆ ಈ ತಂಡದಲ್ಲಿ ಕೇರಳ ರಾಜ್ಯಕ್ಕೆ ಬೇಕಾಗಿರುವ ಬಹಳಷ್ಟು ವರ್ಷಗಳಿಂದ ತಲೆ ಮರೆಸಿಕೊಂಡಿರುವ ನಕ್ಸಲರಿದ್ದಾರೆ ಎನ್ನುವಂತಹ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ.

ಇಲ್ಲಿನ ಕಂಬಮಲೆ ಎಂಬ ಪ್ರದೇಶದಲ್ಲಿ ಟೀ ಎಸ್ಟೇಟ್ ಇದ್ದು, ಇಲ್ಲಿನ ಕೂಲಿ ಕಾರ್ಮಿಕರ ಜೊತೆ ನಕ್ಸಲರು ಮಾತುಕತೆ ನಡಿಸಿದ ವಿಡಿಯೋ ಪೊಲೀಸರಿಗೆ ಲಭ್ಯವಾಗಿದೆ.

- Advertisement -
spot_img

Latest News

error: Content is protected !!