Sunday, July 3, 2022
Homeಕರಾವಳಿಯೆನೆಪೋಯ ವೈದ್ಯಕೀಯ ಕಾಲೇಜು ಹಾಗು ಮಂಗಳೂರು ಮಹಾನಗರ ಪಾಲಿಕೆಯ ಸಹಭಾಗಿತ್ವದಲ್ಲಿ ನೂತನ ಆರೋಗ್ಯ ಕೇಂದ್ರ...

ಯೆನೆಪೋಯ ವೈದ್ಯಕೀಯ ಕಾಲೇಜು ಹಾಗು ಮಂಗಳೂರು ಮಹಾನಗರ ಪಾಲಿಕೆಯ ಸಹಭಾಗಿತ್ವದಲ್ಲಿ ನೂತನ ಆರೋಗ್ಯ ಕೇಂದ್ರ ಉದ್ಘಾಟನೆ

- Advertisement -
- Advertisement -

ಮಂಗಳೂರು : ಸಮುದಾಯ ಆರೋಗ್ಯ ವಿಭಾಗ ಯೆನೆಪೋಯ ವೈದ್ಯಕೀಯ ಕಾಲೇಜು, ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ) ಹಾಗು ಮಂಗಳೂರು ಮಹಾನಗರ ಪಾಲಿಕೆಯ ಸಹಭಾಗಿತ್ವದಲ್ಲಿ ನೂತನ ನಗರ ಆರೋಗ್ಯ ಕೇಂದ್ರವನ್ನು ದಿನಾಂಕ 25.02.2022 ರಂದು ನಗರ ಎಂ ಸಿ ಸಿ ಕಟ್ಟಡ, ಬಂದರಿನಲ್ಲಿ ಪ್ರಾರಂಭಿಸಲಾಯಿತು.


ಮಂಗಳೂರು ಮೇಯರ್ ಶ್ರೀ ಪ್ರೇಮಾಂನಂದ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಣ್ಯರಾದ ಶ್ರೀಮತಿ ಝೀನತ್ ಸಂಶುದ್ದೀನ್, ಕಾರ್ಪೊರೇಟರ್, ಶ್ರೀಮತಿ ಸುಮಂಗಲ, ಉಪ ಮಹಾ ಪೌರರು, ಮಂಗಳೂರು ಮಹಾನಗರ ಪಾಲಿಕೆ, ಡಾ. ಕಿಶೋರ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ, ಶ್ರೀ ಸಂದೀಪ್, ಸಾರ್ವಜನಿಕ ಆರೋಗ್ಯ ಶಿಕ್ಷಣ ಸ್ಥಾಹಿ ಸಮಿತಿ ಅಧ್ಯಕ್ಷರು , ಡಾ. ಮುಹಮ್ಮದ್ ತಾಹಿರ್, ವೈದ್ಯಕೀಯ ನಿರ್ದೇಶಕ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ, ಡಾ. ಎಂ ಯಸ್ ಮುಸಬ್ಬ, ಪ್ರಾಂಶುಪಾಲರು, ಯೆನೆಪೋಯ ವೈದ್ಯಕೀಯ ಕಾಲೇಜು, ಡಾ. ಪ್ರಕಾಶ್ ಆರ್ ಎಂ. ಸಲ್ಡಾನ್ಹಾ , ವೈದ್ಯಕೀಯ ಅಧೀಕ್ಷಕರು ಯೆನೆಪೋಯ ವೈದ್ಯಕೀಯ ಕಾಲೇಜು ಹಾಗು ಆಸ್ಪತ್ರೆ ಡಾ. ಅಭಯ್ ಎಸ್. ನಿರ್ಗುಡೆ, ಅಸೋಸಿಯೇಟ್ ಡೀನ್ ,ಯೆನೆಪೋಯ ವೈದ್ಯಕೀಯ ಕಾಲೇಜು , ಡಾ. ಪೂನಂ ಆರ್ ನಾಯಕ್, ಮುಖ್ಯಸ್ಥರು ಸಮುದಾಯ ವೈದ್ಯಕೀಯ ವಿಭಾಗ,ಭಾಸ್ಕರ್ ಅರಸ ಮುಖ್ಯಸ್ಥರು ಮಾರುಕಟ್ಟೆ ವಿಭಾಗ ,ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸಮುದಾಯ ವೈದ್ಯಕೀಯ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ಧರು.


ಈ ಆರೋಗ್ಯ ಕೇಂದ್ರವು ಸೋಮವಾರದಿಂದ ಶನಿವಾರದ ವರೆಗೆ ಬೆಳಗ್ಗೆ 9.30 ರಿಂದ ಸಂಜೆ 4.00 ವರೆಗೆ ತೆರೆದಿರುವುದು. ಈ ಆರೋಗ್ಯ ಕೇಂದ್ರದಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಶೀತ, ಕೆಮ್ಮು, ಜ್ವರ, ಮಲೇರಿಯಾ, ಡೆಂಗಿ, ಡ್ರೆಸ್ಸಿಂಗ್, ಹಾಗು ಸಾಧಾರಣ ಕಾಯಿಲೆಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಉಚಿತ ಔಷಧಿ ಹಾಗು ಲ್ಯಾಬ್ ಟೆಸ್ಟ್ ಗಳು ಮಾಡಲಾಗುವುದು.

- Advertisement -
- Advertisment -

Latest News

error: Content is protected !!