Sunday, June 7, 2026
Homeಕರಾವಳಿಹರೀಶ್‌ ಪೂಂಜ ಅವರಿಗೆ ಶಕ್ತಿ ನೀಡುತ್ತಿರುವ ಯುವಶಕ್ತಿ

ಹರೀಶ್‌ ಪೂಂಜ ಅವರಿಗೆ ಶಕ್ತಿ ನೀಡುತ್ತಿರುವ ಯುವಶಕ್ತಿ

- Advertisement -
- Advertisement -

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾವು ಪಡೆದುಕೊಂಡಿದೆ.  ಭಾರತೀಯ ಜನತಾ ಪಾರ್ಟಿ ದಿನಾಂಕ 30.04.2023 ರಂದು 20 ಸಾವಿರಕ್ಕೂ ಅಧಿಕ ಕಾರ್ಯಕರ್ತರ ಶ್ರಮದಿಂದ 60 ಸಾವಿರಕ್ಕೂ ಅಧಿಕ ಮನೆಗಳನ್ನು ಒಂದೇ ದಿನದಲ್ಲಿ ತಲುಪುವ ಮೂಲಕ ಭರ್ಜರಿಯಾಗಿಯೇ ಮತಪ್ರಚಾರ ನಡೆಸುತ್ತಿದೆ.

ಇದೀಗ ಹರೀಶ್‌ ಪೂಂಜ ಅವರಿಗೆ ಯುವಶಕ್ತಿಯ ಬೆಂಬಲವೂ ವ್ಯಕ್ತವಾಗಿದೆ. ಯುವ ಸಮುದಾಯ “ಯೂತ್‌ ಫಾರ್‌ ಹರೀಶ್‌ ಪೂಂಜ” ಎನ್ನುವ, 60 ರಿಂದ 100 ಯುವಕರ ತಂಡ ಕಟ್ಟಿಕೊಂಡು ನಗರ ಪ್ರದೇಶದಲ್ಲಿ ಹರೀಶ್‌ ಪೂಂಜ ಪರವಾಗಿ ಮತಪ್ರಚಾರ ನಡೆಸುತ್ತಿದ್ದಾರೆ.  ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜ ಅವರ ಪರವಾಗಿ ಈ ಬಾರಿ ಫೀಲ್ಡಿಗೆ ಇಳಿದಿದ್ದು ಯುವ ಸಮುದಾಯದ ಬೆಂಬಲವನ್ನು ಗಳಿಸುವಲ್ಲಿ ಹರೀಶ್‌ ಪೂಂಜ ಅವರು ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ಕ್ಷೇತ್ರದಲ್ಲಿ ಯುವ ಶಾಸಕ ಹರೀಶ್‌ ಪೂಂಜ ಅವರು ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವುದರ ಜೊತೆಗೆ ಬೆಳ್ತಂಗಡಿ ಕ್ಷೇತ್ರಕ್ಕೆ ಯುವ ಮತ್ತು ಸಮರ್ಥ ನಾಯಕತ್ವದ ಅವಶ್ಯಕತೆಯ ಕುರಿತು ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ನಾರಾವಿ, ವೇಣೂರು,, ಅಳದಂಗಡಿ, ಮಡಂತ್ಯಾರು ಗುರುವಾಯನ ಕೆರೆ, ಉಜಿರೆ ನಗರ ಭಾಗದಲ್ಲಿ ಒಂದು ಸುತ್ತಿನ ಪ್ರಚಾರ ಪೂರ್ಣಗೊಳಿಸಿದ್ದಾರೆ.

- Advertisement -

Latest News

error: Content is protected !!