Saturday, June 6, 2026
Homeತಾಜಾ ಸುದ್ದಿಟಿಕ್​ಟಾಕ್​ ಗೀಳು : ಜೀವಂತ ಮೀನು ನುಂಗಿ ಜೀವ ಕಳೆದುಕೊಂಡ ಯುವಕ

ಟಿಕ್​ಟಾಕ್​ ಗೀಳು : ಜೀವಂತ ಮೀನು ನುಂಗಿ ಜೀವ ಕಳೆದುಕೊಂಡ ಯುವಕ

- Advertisement -
- Advertisement -

ಕೃಷ್ಣಗಿರಿ (ತಮಿಳುನಾಡು): ಟಿಕ್​ಟಾಕ್​ ವಿಡಿಯೋ ಗೀಳು ಹತ್ತಿಸುಕೊಂಡು ಜೀವಂತ ಮೀನು ನುಂಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ನಡೆದಿದೆ.
ಮೃತ ಯುವಕನನ್ನು ಹೊಸೂರಿನ ಪಾರ್ವತಿ ನಗರದ ವೆಟ್ರಿವೆಲ್ (22) ಎಂದು ಗುರುತಿಸಲಾಗಿದೆ. ಮೃತ ವೆಟ್ರಿವೆಲ್ ಕೂಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.ವೆಟ್ರಿವೆಲ್ ಮತ್ತು ಅವನ ಸ್ನೇಹಿತರು ಥರ್ಪೆಟ್ಟೈ ಪ್ರದೇಶದ ಕೆರೆಗೆ ಮೀನು ಹಿಡಿಯಲು ಹೋದಾಗ ಈ ಘಟನೆ ನಡೆದಿದೆ. ಈ ವೇಳೆ ಆತನ ಸ್ನೇಹಿತರೊಂದಿಗೆ ಸೇರಿಕೊಂಡು ಟಿಕ್​ಟಾಕ್​ ವಿಡಿಯೋ ಮಾಡುವುದಕ್ಕೋಸ್ಕರ ಜೀವಂತ ಮೀನನ್ನು ನುಂಗಿದ್ದಾನೆ. ಆದರೆ ಮೀನು ವೆಟ್ರಿವೆಲ್​ನ ಗಂಟಲಿನಲ್ಲಿ ಸಿಲುಕಿಕೊಂಡಿದೆ.

ವೆಟ್ರಿವೆಲ್


ಮೀನು ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ವೆಟ್ರಿವೆಲ್ ಸುಮಾರು ಒಂದು ಗಂಟೆ ಕಾಲ ಉಸಿರಾಡಲು ಹೆಣಗಾಡಿದ್ದಾನೆ. ಆಗ ಆತನ ಸ್ನೇಹಿತರು ಗಂಟಲಿನಲ್ಲಿ ಸಿಲುಕಿದ್ದ ಮೀನು ತೆಗೆಯಲು ಪ್ರಯತ್ನಿದ್ದಾರೆ. ಬಳಿಕ ಸಾಧ್ಯವಾಗದ ಹಿನ್ನೆಲೆ ಕೂಡಲೇ ಆತನನ್ನು ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ.ಆದರೆ, ತಪಾಸಣೆಗೊಳಪಡಿಸಿದ ವೈದ್ಯರು ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಸತ್ತ ಮೀನನ್ನು ಆತನ ಗಂಟಲಿನಿಂದ ಹೊರತೆಗೆಯಲಾಗಿದೆ. ಘಟನೆ ಬಗ್ಗೆ ಮೃತನ ಸ್ನೇಹಿತರನ್ನು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ

- Advertisement -

Latest News

error: Content is protected !!