Thursday, June 4, 2026
Homeಕರಾವಳಿಮಂಗಳೂರುಮಂಗಳೂರು: ಸಿಗರೇಟ್‌ನಲ್ಲಿ ಗಾಂಜಾ ಬೆರೆಸಿ ಸೇವಿಸುತ್ತಿದ್ದ ಯುವಕ ಅರೆಸ್ಟ್

ಮಂಗಳೂರು: ಸಿಗರೇಟ್‌ನಲ್ಲಿ ಗಾಂಜಾ ಬೆರೆಸಿ ಸೇವಿಸುತ್ತಿದ್ದ ಯುವಕ ಅರೆಸ್ಟ್

- Advertisement -
- Advertisement -

ಮಂಗಳೂರು: ಸಿಗರೇಟ್‌ನಲ್ಲಿ ಗಾಂಜಾ ಬೆರೆಸಿ ಸೇವಿಸುತ್ತಿದ್ದ ಯುವಕನನ್ನು ಉರ್ವ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಬಿಜೈ ಕಾಪಿಕಾಡಿನಲ್ಲಿ ನಡೆದಿದೆ.

ಕಾಸರಗೋಡು ಜಿಲ್ಲೆ ಮುಳಿಯಾರ್ ಪೊವ್ವಲ್ ನಿವಾಸಿ ಮೊಹಮ್ಮದ್ ಫಾಸಿಲ್ ಫಿರೋಜ್ ಪಿ.ಸಿ. (23) ಬಂಧಿತ. ಸಾರ್ವಜನಿಕ ರಸ್ತೆಯಲ್ಲಿ ಸಿಗರೇಟು ಸೇದುತ್ತಿದ್ದ ಈತ, ಪೊಲೀಸರು ಬರುತ್ತಿದ್ದಂತೆ ಸಿಗರೇಟನ್ನು ಚರಂಡಿಗೆ ಎಸೆದಿದ್ದಾನೆ.

ಪರಿಶೀಲಿಸಿದಾಗ ಬಾಯಿಯಲ್ಲಿ ಮಾದಕ ವಸ್ತು ಸೇವನೆಯ ಘಾಟು ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಗಾಂಜಾವನ್ನು ಸಿಗರೇಟಿನೊಳಗೆ ತುಂಬಿಸಿ ಸೇದುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!