- Advertisement -
- Advertisement -
ಸುಳ್ಯ: ಚಲಿಸುತ್ತಿದ್ದ ಕಾರಿನಲ್ಲಿ ಯುವಕರ ಹುಚ್ಚಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಚ್ಚಾಟ ಮೆರೆದ 6 ಮಂದಿಯನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏ.5 ರಂದು ಸಂಪಾಜೆ ಕಡೆಯಿಂದ ಸುಳ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನಲ್ಲಿ ಏಳು ಮಂದಿ ಯುವಕರು ಕಾರಿನ ಡೋರ್‌ನಿಂದ ಹೊರಗೆ ಬಂದು ಕುಳಿತು ಹುಚ್ಚಾಟ ಮೆರೆದಿದ್ದರು. ಘಟನೆ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು. ಸುಳ್ಯ ಪೊಲೀಸರು ಪ್ರಕರಣವನ್ನು ದಾಖಲು ಮಾಡಿ ಹುಡುಕಾಟ ಪ್ರಾರಂಭಿಸಿದ್ದರು. ಅದರಂತೆ ಭಟ್ಕಳ ಮೂಲದ ಸಾಝಿಲ್ ಆತಿಫ್, ಸಮನ್, ಶೈಬಾಜ್ ಹಸ್ಸನ್ ಎಂಬ ಯುವಕರನ್ನು ಭಟ್ಕಳದಿಂದ ಸುಳ್ಯಕ್ಕೆ ಕರೆತಂದಿದ್ದು, ವಿಚಾರಣೆ ನಡೆಸಿ ಕಾನೂನು ರೀತಿಯ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಏಳು ಮಂದಿಯ ಪೈಕಿ ಓರ್ವ ಆರೋಪಿ ಸಾಜೀಬ್ ಎಂಬಾತ ಪೊಲೀಸರ ಕೈಗೆ ಸಿಗದೇ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.
- Advertisement -