Friday, June 5, 2026
Homeಕರಾವಳಿಮೂಡುಬಿದರೆಯಲ್ಲಿ ಬೈಕ್ ಗೆ ಬೋರ್ ವೆಲ್ ಲಾರಿ ಡಿಕ್ಕಿ: ಬೈಕ್ ಸವಾರ ಸಾವು

ಮೂಡುಬಿದರೆಯಲ್ಲಿ ಬೈಕ್ ಗೆ ಬೋರ್ ವೆಲ್ ಲಾರಿ ಡಿಕ್ಕಿ: ಬೈಕ್ ಸವಾರ ಸಾವು

- Advertisement -
- Advertisement -

ಮೂಡುಬಿದಿರೆ: ಬೈಕಿಗೆ ಬೋರ್ ವೆಲ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಕೊಂಪದವು ತಿರುವಿನಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಮುಚ್ಚೂರು ಕಾನ ನಿವಾಸಿ ಚಂದ್ರಶೇಖರ್ ಗೌಡ (32) ಮೃತಪಟ್ವವರು. ಕೂಲಿ ಕಾರ್ಮಿಕರಾಗಿದ್ದ ಇವರು ಬೆಳಗ್ಗೆ ಕುಡುಪು ದೇವಸ್ಥಾನದಲ್ಲಿ ಷಷ್ಠಿ ಜಾತ್ರೆಗೆ ಹೋಗಿದ್ದು, ಅಲ್ಲಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಕೊಂಪದವು ತಿರುವಿನಲ್ಲಿ ಬೋರ್ ವೆಲ್ ಲಾರಿ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿದ್ದು, ಈ ವೇಳೆ ಬೈಕ್‍ನಿಂದ ರಸ್ತೆಗೆ ಎಸೆಯಲ್ಪಟ್ಟ ಚಂದ್ರಶೇಖರ್ ತಲೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಅವರು ಸ್ಥಳದಲ್ಲೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!