Thursday, June 4, 2026
Homeಕರಾವಳಿಬಂಟ್ವಾಳ: ಬೈಕ್ ಗೆ ಖಾಸಗಿ‌ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಯುವಕ ಸಾವು

ಬಂಟ್ವಾಳ: ಬೈಕ್ ಗೆ ಖಾಸಗಿ‌ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಯುವಕ ಸಾವು

- Advertisement -
- Advertisement -

ಬಂಟ್ವಾಳ: ಬೈಕ್ ಗೆ ಖಾಸಗಿ‌ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಯುವಕ ಸಾವನ್ನಪ್ಪಿರುವ ಘಟನೆ ಕಲ್ಲಡ್ಕದಲ್ಲಿ ನಿನ್ನೆ ಸಂಜೆ ನಡೆದಿದೆ.ಕಲ್ಲಡ್ಕ ಗೋಳ್ತಮಜಲು ಮುರಬೈಲು ನಿವಾಸಿ ಲತೀಶ್ ಮೃತ ಯುವಕ .

ಮಂಗಳೂರಿನಲ್ಲಿ ಮ್ಯೆಕಾನಿಕ್  ಆಗಿ ಕೆಲಸ ಮಾಡುತ್ತಿದ್ದ ಲತೀಶ್, ಭಾನುವಾರ ರಜಾದಿನವಾದ ಕಾರಣ ಬೆಳಿಗ್ಗೆ ಪಣೋಲಿಬೈಲು ದೇವಸ್ಥಾನಕ್ಕೆ ಹೋಗಿ ಮನೆಗೆ ವಾಪಾಸ್ಸಾಗುತ್ತಿದ್ದಾಗ ಕಲ್ಲಡ್ಕ ದಲ್ಲಿ ಅಪಘಾತ ನಡೆದಿದೆ .ಕಲ್ಲಡ್ಕದಿಂದ ವಿಟ್ಲ ರಸ್ತೆಯಲ್ಲಿ ಹೋಗುವ ವೇಳೆ ವಿಟ್ಲದಿಂದ ಅತೀ ವೇಗದಿಂದ ಬರುತ್ತಿದ್ದ ಸೆಲಿನಾ ಖಾಸಗಿ‌ ಬಸ್ ಬೈಕ್ ಗೆ ಡಿಕ್ಕಿ ಯಾಗಿದೆ.

ಡಿಕ್ಕಿಯ ರಭಸಕ್ಕೆ ಲತೀಶ್ ಗೆ ಗಂಭೀರವಾಗಿ ಗಾಯವಾಗಿತ್ತು. ಅವರನ್ನು ಕೂಡಲೇ ಮಂಗಳೂರು ‌ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.ಚಿಂತಾಜನಕ ಸ್ಥಿತಿಯಲ್ಲಿದ್ದ ಅವರಿಗೆ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಲತೀಶ್ ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಟ್ರಾಫಿಕ್ ಎಸ್. ಐ.ಸುತೇಶ್ ಸ್ಥಳಕ್ಕೆ ಬೇಟಿ ನೀಡಿದ್ದು,ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!