Wednesday, June 24, 2026
Homeಕರಾವಳಿಮಂಗಳೂರು : ಯುವಕನನ್ನು ಬಲಿ ಪಡೆದ ಡೆಂಗ್ಯೂ ಜ್ವರ

ಮಂಗಳೂರು : ಯುವಕನನ್ನು ಬಲಿ ಪಡೆದ ಡೆಂಗ್ಯೂ ಜ್ವರ

- Advertisement -
- Advertisement -

ಮಂಗಳೂರು :  ಡೆಂಗ್ಯೂ ಜ್ವರಕ್ಕೆ ಯುವಕ ಬಲಿಯಾಗಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ. ಹರೇಕಳ ನ್ಯೂಪಡ್ಪು ನಿವಾಸಿ ಪ್ರಸ್ತುತ ನಾಟೆಕಲ್‌ ನಲ್ಲಿ ನೆಲೆಸಿದ್ದ ನವಾಝ್‌ (32) ಮೃತ ಯುವಕ.

ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ನವಾಝ್‌ ಗುರುವಾರ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಸಾವನ್ನಪ್ಪಿದ್ದಾರೆ. ಮಂಗಳೂರಿನ ಬಂದರು ಪ್ರದೇಶದಲ್ಲಿರುವ ಜಿ ಎಲ್‌ ಜಿ ಫಿಶರೀಸ್‌ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ನವಾಝ್‌ ಪತ್ನಿ, ಒಂದು ವರ್ಷದ ಪುಟ್ಟ ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

- Advertisement -

Latest News

error: Content is protected !!