Saturday, May 4, 2024
Homeಕರಾವಳಿಬಂಟ್ವಾಳದಲ್ಲಿ ಗ್ಯಾಸ್ ಗೀಝರ್ ನಲ್ಲಿ ಸ್ನಾನ ಮಾಡುತ್ತಿದ್ದ ಉಸಿರು ಗಟ್ಟಿ ಯುವಕ ಸಾವು

ಬಂಟ್ವಾಳದಲ್ಲಿ ಗ್ಯಾಸ್ ಗೀಝರ್ ನಲ್ಲಿ ಸ್ನಾನ ಮಾಡುತ್ತಿದ್ದ ಉಸಿರು ಗಟ್ಟಿ ಯುವಕ ಸಾವು

spot_img
- Advertisement -
- Advertisement -

ಬಂಟ್ವಾಳ: ಗ್ಯಾಸ್ ಗೀಸರ್ ನಲ್ಲಿ ಸ್ನಾನ ಮಾಡುತ್ತಿದ್ದ ಯುವಕ ಬಾತ್ ರೂಂನಲ್ಲೇ ಉಸಿರು ಗಟ್ಟಿ ಸಾವನ್ನಪ್ಪಿರುವ ಘಟನೆ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ನಿನ್ನೆ ನಡೆದಿದೆ.

;;

ಇಸ್ಮಾಯೀಲ್ ಎಂಬವರ ಪುತ್ರ ಇಜಾಝ್ ಅಹ್ಮದ್ (23) ಮೃತಪಟ್ಟ ಯುವಕ. ಈತ ಬಾತ್ ರೂಂನಲ್ಲಿ  ಗ್ಯಾಸ್ ಗೀಝರ್ ಅನ್ನು ಆನ್ ಮಾಡಿ ಸ್ನಾನ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಸ್ನಾನಕ್ಕೆ ತೆರಳಿದ ಇಜಾಝ್ ಅಹ್ಮದ್ ಒಂದು ಗಂಟೆಯಾದರೂ ಹೊರ ಬರದ ಹಿನ್ನೆಲೆಯಲ್ಲಿ ಹಾಗೂ ಕರೆದರೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಆತನ ತಂದೆ ಮತ್ತು ಸಹೋದರರು ಬಾಗಿಲು ಒಡೆದು ನೋಡಿದಾಗ ಆತ ಕೊಠಡಿಯಲ್ಲಿ ಬಿದ್ದಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗೆ ಆತ ಮೃತಪಟ್ಟಿದ್ದ. ಗ್ಯಾಸ್ ಗೀಝರ್ ನಲ್ಲಿ ನೀರು ಬಿಸಿ ಮಾಡುವ ವೇಳೆ ಗೀಝರ್ ನಿಂದ ಹೊರ ಬರುವ ಕಾರ್ಬನ್ ಮಾನಾಕ್ಸೈಡ್ ಸೇವಿಸಿ ಸಾವು ಸಂಭವಿಸಿದೆ ಎನ್ನಲಾಗಿದೆ.

;;

ಹುಬ್ಬಳ್ಳಿಯ ಜುವೆಲ್ಲರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇಜಾಝ್ ಅಹ್ಮದ್ ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದ‌ ಎನ್ನಲಾಗಿದೆ. ಮೃತ ಯುವಕ ತಂದೆ, ತಾಯಿ, ಮೂವರು ಸಹೋದರರನ್ನು ಅಗಲಿದ್ದಾನೆ.

- Advertisement -
spot_img

Latest News

error: Content is protected !!