Wednesday, June 3, 2026
Homeಕರಾವಳಿಮಂಗಳೂರುಮಂಗಳೂರು: ನನಗೆ ಸಹಕರಿಸು ಇಲ್ಲಾಂದ್ರೆ ನಿನ್ನ 24 ಪೀಸ್ ಮಾಡ್ತೇನೆ ಎಂದು ಯುವತಿಗೆ ಬೆದರಿಕೆ ಮೆಸೇಜ್;...

ಮಂಗಳೂರು: ನನಗೆ ಸಹಕರಿಸು ಇಲ್ಲಾಂದ್ರೆ ನಿನ್ನ 24 ಪೀಸ್ ಮಾಡ್ತೇನೆ ಎಂದು ಯುವತಿಗೆ ಬೆದರಿಕೆ ಮೆಸೇಜ್; ಅನ್ಯ ಕೋಮಿನ ಯುವಕ ಅರೆಸ್ಟ್

- Advertisement -
- Advertisement -

ಮಂಗಳೂರು: ನನಗೆ ಸಹಕರಿಸು ಇಲ್ಲಾಂದ್ರೆ ನಿನ್ನ 24 ಪೀಸ್ ಮಾಡ್ತೇನೆ ಎಂದು ಯುವತಿಗೆ ಬೆದರಿಕೆ ಮೆಸೇಜ್ ಕಳುಹಿಸಿದ ಅನ್ಯ ಕೋಮಿನ ಯುವಕನನ್ನು  ಅರೆಸ್ಟ್ ಮಾಡಿರುವ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.

ಸುರತ್ಕಲ್‌ ಇಡ್ಯಾ ನಿವಾಸಿ ಸದಾಶಿವನಗರದ ಶಾರಿಕ್‌ ನೂರ್ಜಹಾನ್‌ ತನ್ನ ಮನೆ ಸಮೀಪದಲ್ಲೇ ವಾಸಿಸುವ ಯುವತಿಯೋರ್ವಳಿಗೆ ನನ್ನ ಜೊತೆ ಸಹಕರಿಸು, ಇಲ್ಲಾಂದ್ರೆ 24 ತುಂಡು ಮಾಡುವೆ ಎಂದು ಮೆಸೇಜ್‌ ಮಾಡಿದ್ದಾನೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಸುರತ್ಕಲ್‌ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ.

ಯುವತಿಯ ಸಹೋದರನಿಗೆ ವಾಟ್ಸಾಪ್‌ ಮೆಸೇಜ್‌ ಮಾಡಿದ ಈತ ಬೆದರಿಕೆ ಹಾಕಿದ್ದು, ಇದರಿಂದ ಕುಟುಂಬ ಆತಂಕಗೊಂಡಿದ್ದು, ಸುರತ್ಕಲ್‌ ಠಾಣೆಯಲ್ಲಿ ದೂರು ನೀಡಿದೆ. ಯುವಕನನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭಿಸಿದೆ.

- Advertisement -

Latest News

error: Content is protected !!