Wednesday, June 3, 2026
Homeಕರಾವಳಿಬೆಳ್ತಂಗಡಿ: ಕಾಲು ಜಾರಿ ಬಾವಿಗೆ ಬಿದ್ದು ಯುವತಿ ಸಾವು

ಬೆಳ್ತಂಗಡಿ: ಕಾಲು ಜಾರಿ ಬಾವಿಗೆ ಬಿದ್ದು ಯುವತಿ ಸಾವು

- Advertisement -
- Advertisement -

ಬೆಳ್ತಂಗಡಿ: ಯುವತಿಯೋರ್ವಳು ಕಾಲು ಜಾರಿಗೆ ಬಾವಿಗೆ ಬಿದ್ದಿರುವ ಘಟನೆ ತಾಲೂಕಿನ ವೇಣೂರಿನ ಗೋಳಿಯಂಗಡಿಯ ಎಸ್.ಡಿ.ಎಮ್.ಐಟಿಐ ಕಾಲೇಜ್ ಬಳಿಯಲ್ಲಿ ನಡೆದಿದೆ.

ಮೃತರನ್ನು ಐಷಾತುಲಾ ಅನಿಷಾ(18) ಎಂದು ಗುರುತಿಸಲಾಗಿದೆ. ಪ್ರತಿನಿತ್ಯ ಬಟ್ಟೆ ಒಗೆದು ನಂತರ ಬಾವಿಯ ಕಟ್ಟೆಯಲ್ಲಿ ಒಣಗಿಸುತ್ತಿದ್ದ ಐಷಾತುಲಾ ಅನಿಷಾ, ಎಂದಿನಂತೆ ಇಂದು ಬಟ್ಟೆ ಒಗೆದು ನಂತರ ಒಣಗಿಸಲು ಬಾವಿಯ ಕಟ್ಟೆಗೆ ಹೋದಾಗ ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಯುವತಿಗೆ ಕಣ್ಣಿನ ಸಮಸ್ಯೆ ಇತ್ತು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಹಾಗೂ ಬೆಳ್ತಂಗಡಿ ಅಗ್ನಿಶಾಮಕ ದಳ ದೌಡಾಯಿಸಿ ಮೃತದೇಹ ಮೇಲಕೆತ್ತಿದ್ದಾರೆ. ಈ ಸಂಬಂಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!