ಕಡಬ; ಬಟ್ಟೆ ಹೊಲಿಯಲು ಕಡಲು ಹೋಗೋದಾಗಿ ಹೇಳಿ ಹೋದ ಯುವತಿ ನಾಪತ್ತೆಯಾಗಿರುವ ಘಟನೆ ಕಾಣಿಯೂರು ಸಮೀಪದ ಚಾರ್ವಾಕ ಗ್ರಾಮದ ಅಂಬುಲದಲ್ಲಿ ನಡೆದಿದೆ. ಅಂಬುಲ ನಿವಾಸಿ ದೀಕ್ಷಾ (24) ನಾಪತ್ತೆಯಾದ ಯುವತಿ.
ದೀಕ್ಷಾ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದ ಈಕೆ ರಜೆ ಮಾಡಿ ಜ.1 ರಂದು ಊರಿಗೆ ಬಂದು ಮನೆಯಲ್ಲೆ ಉಳಿದುಕೊಂಡಿದ್ದಳು. ಜ.14 ರಂದು ಸಂಜೆ ಬಟ್ಟೆ ಹೊಲಿಯಲು ಅಂಗಡಿಗೆ ಹೋಗಿ ಬರುವುದಾಗಿ ಹೋದಾಕೆ ಕತ್ತಲಾದರೂ ಮನೆಗೆ ಬಂದಿರಲಿಲ್ಲ. ಮನೆ ಮಂದಿ ಹುಡುಕಾಡಿದ ಸಂದರ್ಭದಲ್ಲಿ ಸುಮಾರು 1 ಕಿ.ಮೀ ದೂರದ ರಸ್ತೆಯೊಂದರಲ್ಲಿ ಸ್ಕೂಟಿ ಮಾತ್ರ ಪತ್ತೆಯಾಗಿದೆ. ಆಕೆಯ ಮೊಬೈಲ್ ಗೆ ಕರೆ ಮಾಡಿದರೂ ಸ್ವೀಚ್ ಆಫ್ ಬರುತ್ತಿತ್ತು. ಪರಿಚಯಸ್ಥರಲ್ಲಿ ವಿಚಾರಿಸಿದಾಗ ಆಕೆ ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅಂಬರೀಶ್ ಮತ್ತು ಗೆಳೆಯರ ಬಗ್ಗೆ ಸಂಶಯ ವ್ಯಕ್ತಪಡಿಸಿ ಯುವತಿಯ ತಂದೆ ಚಂದ್ರಶೇಖರ ಅವರು ಕಡಬ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.