Thursday, February 13, 2025
Homeಕರಾವಳಿಯಕ್ಷಗಾನಕ್ಕೆ ಅಮೆರಿಕದಲ್ಲಿ ಸಿಕ್ಕ ಗೌರವ ಅವಿಸ್ಮರಣೀಯ: ಪಟ್ಲ ಸತೀಶ್‌ ಶೆಟ್ಟಿ

ಯಕ್ಷಗಾನಕ್ಕೆ ಅಮೆರಿಕದಲ್ಲಿ ಸಿಕ್ಕ ಗೌರವ ಅವಿಸ್ಮರಣೀಯ: ಪಟ್ಲ ಸತೀಶ್‌ ಶೆಟ್ಟಿ

spot_img
- Advertisement -
- Advertisement -

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್‌ ಸ್ಥಾಪಕ ಪಟ್ಲಗುತ್ತು ಸತೀಶ್‌ ಶೆಟ್ಟಿ ಹಾಗೂ ಅವರ ತಂಡ ಅಮೆರಿಕದಲ್ಲಿ ಯಶಸ್ವಿಯಾಗಿ ಯಕ್ಷಗಾನ ಪ್ರವಾಸ ಕೈಗೊಂಡು, ತಾಯ್ನಾಡಿಗೆ ಮರಳಿದ್ದು, ಬಜ್ಪೆ ವಿಮಾನ ನಿಲ್ದಾಣದಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳು ಅವರನ್ನ ಸ್ವಾಗತಿಸಿದರು.

ಅಮೆರಿಕದ ಬೇರೆ ಬೇರೆ ತಾಣಗಳಲ್ಲಿ ಸತೀಶ್‌ ಶೆಟ್ಟಿ ನೇತೃತ್ವದ 9 ಮಂದಿಯ ತಂಡವು ಯಕ್ಷಗಾನ ಪ್ರದರ್ಶಿಸಿ 75 ದಿನಗಳ ಬಳಿಕ ತಾಯ್ನಾಡಿಗೆ ಮರಳಿದೆ.

ಈ ವೇಳೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ತಮ್ಮ ಅಮೆರಿಕ ಪ್ರವಾಸದ ಕಥನವನ್ನು ಹಂಚಿಕೊಂಡ ಪಟ್ಲ ಸತೀಶ್ ಶೆಟ್ಟಿ, ‘ವಿದೇಶದಲ್ಲಿ ತುಳುನಾಡಿನ ಕಲೆಯಾಗಿರುವ ಯಕ್ಷಗಾನದ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಹೆಮ್ಮೆ ಅನಿಸುತ್ತಿದೆ. ಅಲ್ಲಿನ ಜನರು ಕೂಡ ಯಕ್ಷಗಾನ ನಾಟ್ಯ ಮತ್ತು ಭಾಗವತಿಕೆಗೆ ಮನಸೋತು ಕಲಿಯಲು ಆಸಕ್ತಿ ತೋರಿಸಿರುವುದು ಖುಷಿಯ ಸಂಗತಿ. ಇನ್ನು ಅಮೆರಿಕದ ಎರಡು ನಗರಗಳಲ್ಲಿ ಪಟ್ಲ ಫೌಂಡೇಶನ್‌ ದಿನವನ್ನಾಗಿ ಅಲ್ಲಿನ ಮೇಯರ್‌ ಘೋಷಿಸಿರುವುದು ಅವಿಸ್ಮರಣೀಯ ಅನುಭವ. ಇಂದು ನಮ್ಮ ನಮ್ಮ ಕಲೆಗೆ ವಿಶ್ವವ್ಯಾಪಿ ಮನ್ನಣೆ ಸಿಗುತ್ತಿದೆ. ಪಟ್ಲ ಫೌಂಡೇಷನ್‌ ಟ್ರಸ್ಟ್‌ ಅಮೆರಿಕ ಘಟಕದ ಅಧ್ಯಕ್ಷ ಡಾ| ಅರವಿಂದ ಉಪಾಧ್ಯಾಯ, ಡಾ| ಶ್ರೀಧರ ಆಳ್ವ, ಮಹಾಬಲ ಶೆಟ್ಟಿ, ಉಳಿ ಯೋಗೇಂದ್ರ ಭಟ್‌ ಮತ್ತಿತರ ಪ್ರಮುಖರು ಅಮೆರಿಕದ 20 ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸಿದ್ದು, ಅವರಿಗೆ ಧನ್ಯವಾದ ಸಲ್ಲಿಸುವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರೊ| ಎಂ.ಎಲ್‌. ಸಾಮಗ, ಪಟ್ಲ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಅಡ್ಯಾರ್‌ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್‌ ಕುಮಾರ್‌ ರೈ, ಸಂಘಟನ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಪ್ರದೀಪ್‌ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಜತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಮಾಜಿ ವಿಧಾನಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಮತ್ತಿತರರು ಉಪಸ್ಥಿತರಿದ್ದರು.

ಅಮೆರಿಕದ ವಿಸ್ಕಾನ್ಸಿನ್‌ ರಾಜ್ಯದ ಬ್ರೂಕ್‌ಫೀಲ್ಡ್ ನಗರದ ಮೇಯರ್‌ಸ್ಟೀವನ್‌ ವಿ. ಪೋಂಟೊ ಅವರು ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಪ್ರದರ್ಶಿಸಿದ ಯಕ್ಷಗಾನ ಹಾಗೂ ಪಟ್ಲ ಫೌಂಡೇಷನ್‌ ಕಾರ್ಯ ಚಟುವಟಿಕೆಯನ್ನು ಮೆಚ್ಚಿ ಆ. 18 ಅನ್ನು ‘ಯಕ್ಷಧ್ರುವ ಪಟ್ಲ ಫೌಂಡೇಷನ್‌ ಡೇ’ ಎಂದು ಘೋಷಿಸಿದ್ದಾರೆ. ಕ್ಯಾಲಿಫೋರ್ನಿಯಾ ರಾಜ್ಯದ ಫೀನಿಕ್ಸ್‌ ಮೇಯರ್‌ ಜುಲೈ 27 ಅನ್ನು ‘ಯಕ್ಷಧ್ರುವ ಪಟ್ಲ ಫೌಂಡೇಷನ್‌ ಡೇ’ ಎಂದು ಘೋಷಿಸಿದ್ದಾರೆ.

- Advertisement -
spot_img

Latest News

error: Content is protected !!