Saturday, May 4, 2024
Homeತಾಜಾ ಸುದ್ದಿವೈದ್ಯಲೋಕಕ್ಕೆ ಹೀಗೊಂದು ಅಚ್ಚರಿ ; 210 ನಿಮಿಷ ಹೃದಯ ಕೆಲಸ ನಿಲ್ಲಿಸಿದರೂ ಬದುಕುಳಿದ ಮಹಿಳೆ

ವೈದ್ಯಲೋಕಕ್ಕೆ ಹೀಗೊಂದು ಅಚ್ಚರಿ ; 210 ನಿಮಿಷ ಹೃದಯ ಕೆಲಸ ನಿಲ್ಲಿಸಿದರೂ ಬದುಕುಳಿದ ಮಹಿಳೆ

spot_img
- Advertisement -
- Advertisement -

ತ್ತರಪ್ರದೇಶ : ವೈದ್ಯಲೋಕಕ್ಕೆ ಅಚ್ಚರಿಯಾಗುವಂತಹ ಘಟನೆಯೊಂದು ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. 210 ನಿಮಿಷದಷ್ಟು ಕಾಲ ಹೃದಯ ಕೆಲಸ ಮಾಡದೇ ನಿಂತರೂ ಮಹಿಳೆಯೊಬ್ಬರು ಬದುಕಿ ಉಳಿದಿದ್ದಾರೆ.

ಕಂಕರ್‌ ಖೇಡಾ ನಿವಾಸಿ 34 ವರ್ಷದ ಕವಿತಾ ರಾಜು ಅವರಿಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ಅವರ 210 ನಿಮಿಷ ಹೃದಯ ನಿಂತರೂ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಇದು ವೀರತ್‌ ಲಾಲಾ ಲಜಪತ್‌ ರಾಯ್‌ ಮೆಮೊರಿಯಲ್‌ ವೈದ್ಯಕೀಯ ಕಾಲೇಜಿನಲ್ಲಿ ಇಂಥದ್ದೊಂಡು ಅಪರೂಪದ ಪವಾಡ ನಡೆದಿದೆ. ವೈದ್ಯರು ಕವಿತಾ ಅವರ ಪ್ರಾಣ ಉಳಿಸಿದ್ದಾರೆ.

ಆದ್ರೆ ಇಷ್ಟು ಸುದೀಘ್ರ ಅವಧಿಯವರೆಗೆ ಸಹಜ ಹೃದಯ ಬಡಿತವನ್ನು ನಿಲ್ಲಿಸಿರುವುದು ವೈದ್ಯಕೀಯ ಲೋಕದಲ್ಲೇ ತಲ್ಲಣ ಮೂಡಿಸಿದೆ. ಒಂದು ವೇಳೆ ಶಸ್ತ್ರ ಚಿಕಿತ್ಸೆ ಮಾಡುವಾಗ 3 ನಿಮಿಷ ಕಾಲ ಮೆದುಳಿಗೆ ರಕ್ತ ಪೂರೈಕೆ ಆಗಿಲ್ಲವೆಂದ್ರೆ ಮೆದುಳು ನಿಷ್ಕ್ರೀಯಗೊಳ್ಳುವ ಸಾಧ್ಯತೆ ಇರುತ್ತದೆ. ಆದರಿಂದ ಪ್ರತಿಯೊಬ್ಬ ರೋಗಿಗಳು ಶಸ್ತ್ರ ಚಿಕಿತ್ಸೆಯ ವೇಳೆ 3 ನಿಮಿಷ ತುಂಬಾ ಅಮೂಲ್ಯವಾಗಿದೆ. ಇದೇ ಆರೋಗಿಯ ಸಾವು ಬದುಕನ್ನು ನಿರ್ಧರಿಸುವಂಥದ್ದು, ಆದರೆ ಈ ಪ್ರಕರಣದಲ್ಲಿ 210 ನಿಮಿಷ ಹೃದಯ ಬಡಿತವನ್ನೇ ನಿಲ್ಲಿಸಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿರುವ ವೈದ್ಗರಿಗೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ

ಕವಿತಾ ಅವರು ಕಳೆದ ಎರಡು ವರ್ಷಗಳಿಂದ ಅಸಹಜ ಹೃದಯ ಬಡಿತ ಮತ್ತು ಎದೆ ನೋವಿನಿಂದ ಬಳಲುತ್ತಿದ್ದರು. ಹಲವು ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಲೋಚನೆ ನಡೆಸಿದರೂ, ಚಿಕಿತ್ಸೆ ಮಾತ್ರ ಸಿಕ್ಕಿರಲಿಲ್ಲ. ಅವರು ಮೀರತ್ ವೈದ್ಯಕೀಯ ಕಾಲೇಜಿನ ಕಾರ್ಡಿಯೋ ಥೋರಾಸಿಕ್ ಸರ್ಜನ್​ ಜತೆ ಸಮಾಲೋಚನೆ ನಡೆಸಿದರು.

ಅವರನ್ನು ಪರೀಕ್ಷೆ ಮಾಡಿದಾಗ ಮಿಟ್ರಲ್ ವಾಲ್ವ್ ಹಾನಿಗೊಳಗಾಗಿರುವುದು ಕಂಡುಬಂದಿತ್ತು. ಮಿಟ್ರಲ್ ಕವಾಟವನ್ನು ಬದಲಿಸಲು ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾಗಿ ಇದೀಗ ಯಶಸ್ವಿಯಾಗಿದ್ದೇವೆ ಎಂದು ವೈದ್ಯಕೀಯ ಕಾಲೇಜಿನ ಮಾಧ್ಯಮ ಪ್ರಭಾರಿ ಡಾ. ವಿ.ಡಿ. ಪಾಂಡೆ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!