Friday, June 5, 2026
Homeಕರಾವಳಿಮಂಗಳೂರು; ಕೆಂಜಾರಿನಲ್ಲಿ ವಿವಾಹಿತ ಮಹಿಳೆ ನಾಪತ್ತೆ

ಮಂಗಳೂರು; ಕೆಂಜಾರಿನಲ್ಲಿ ವಿವಾಹಿತ ಮಹಿಳೆ ನಾಪತ್ತೆ

- Advertisement -
- Advertisement -

ಮಂಗಳೂರು; ವಿವಾಹಿತ ಮಹಿಳೆ ನಾಪತ್ತೆಯಾಗಿರುವ ಘಟನೆ ಕೆಂಜಾರಿನಲ್ಲಿ ನಡೆದಿದೆ.  ಈ ಬಗ್ಗೆ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಂಜಾರು ಗ್ರಾಮದಲ್ಲಿ ವಾಸವಾಗಿರುವ ಪಂಕಜ್‌ ಕುಮಾರ್‌ ಗುಪ್ತಾ ಎಂಬವರ ಪತ್ನಿ ರಿಚಾಸಿಂಗ್ (29) ನಾಪತ್ತೆಯಾಗಿರುವ ಮಹಿಳೆ.

 ರಿಚಾ ಸಿಂಗ್‌ ಅವರು ಒಂದು ವಾರದಿಂದ ಕೆಲಸಕ್ಕೆ ತೆರಳದೇ ಮನೆಯಲ್ಲೇ ಇದ್ದರು. ಬುಧವಾರ 11.30ರ ಸುಮಾರಿಗೆ ಪತಿ ಪಂಕಜ್‌ ಅವರ ಮೊಬೈಲ್‌ಗೆ ಮೆಸೇಜ್‌ ಮಾಡಿದ್ದು, ನಾನು ಮನೆಬಿಟ್ಟು ತೆರಳುತ್ತಿರುವುದಾಗಿ ಹೇಳಿದ್ದರು. ಪಂಕಜ್‌ ಕುಮಾರ್‌ ಅವರು ಸಂಜೆ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಮನೆಗೆ ಬೀಗಹಾಕಿತ್ತು. ಟ್ಯೂಷನ್ ಗೆ ತೆರಳಿದ್ದ ಮಗನನ್ನು ವಿಚಾರಿಸಿದಾಗ ಗೊತ್ತಿಲ್ಲ ಎಂದಿದ್ದಾನೆ. ಬಳಿಕ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎಂದು ಪಂಕಜ್‌ ಕುಮಾರ್‌ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬಜ್ಪೆ ಪೊಲೀಸರು ಮಹಿಳೆಯ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

- Advertisement -

Latest News

error: Content is protected !!