Friday, June 5, 2026
Homeತಾಜಾ ಸುದ್ದಿಅಜಾಗರೂಕತೆಯಿಂದ ಕಾರ್ ಸ್ಟಾರ್ಟ್ ಮಾಡಿದ ಮಹಿಳೆ: ಡೋರ್ ಹಾಗೂ ಮರದ ಮಧ್ಯೆ ಸಿಲುಕಿ ಸಾವು..

ಅಜಾಗರೂಕತೆಯಿಂದ ಕಾರ್ ಸ್ಟಾರ್ಟ್ ಮಾಡಿದ ಮಹಿಳೆ: ಡೋರ್ ಹಾಗೂ ಮರದ ಮಧ್ಯೆ ಸಿಲುಕಿ ಸಾವು..

- Advertisement -
- Advertisement -

ಬೆಂಗಳೂರು : ಕೆಲವೊಮ್ಮೆ ನಾವು ಮಾಡೋ ಅರ್ಜೆಂಟ್ ಹೇಗೆ ನಮ್ಮ ಪ್ರಾಣಕ್ಕೆ ಕುತ್ತಾಗುತ್ತೆ ಅಂತಾ ಹೇಳೋದಕ್ಕೆ ಸಾಧ್ಯಾನೇ ಆಗಲ್ಲ. ಇಂತಹದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಿನ್ನೆ ಮಧ್ಯಾಹ್ನ ನಡೆದಿದೆ. ನಗರದ ನ್ಯೂ ಬಿಇಎಲ್ ರಸ್ತೆಯ ಆರ್ ಕೆ ಗಾರ್ಡನ್ ನಲ್ಲಿನ 4ನೇ ಕ್ರಾಸಿನಲ್ಲಿ ಘಟನೆ ನಡೆದಿದೆ. ಈ ಘಟನೆಯಲ್ಲಿ ನಂದಿನಿ ರಾವ್ ಸಾವನ್ನಪ್ಪಿದ್ದಾರೆ. ಅಜಾಕರೂತೆಯಿಂದ  ಕಾರ್ ಸ್ಟಾರ್ಟ್ ಮಾಡಿದೇ ನಂದಿನಿ ಸಾವಿಗೆ ಕಾರಣವಾಗಿದೆ. ಕೆಎ 03 ಎಂಎಂ 2189 ನಂಬರ್ ಕಾರು  ಮನೆ ಬಳಿ ನಿಂತಿತ್ತು.
ಡ್ರೈವರ್ ಡೋರ್ ತೆಗೆದು ಕಾರಿನ ಹೊರಗೆ ನಿಂತೇ ನಂದಿನಿ ಕಾರನ್ನು ಸ್ಟಾಟ್ ಮಾಡಿದ್ದಾರೆ.

ಈ ವೇಳೆ ರಿವರ್ಸ್ ಗೇರ್ ನಲ್ಲಿದ್ದ ಕಾರ್ ಹಿಂದೆ ಚಲಿಸಿದೆ. ಕಾರಿನ ಡೋರ್ ಹಾಗೂ ಪಕ್ಕದ ಮರದ ನಡುವೆ ನಂದಿನಿ ಸಿಲುಕಿ ಮೃತಪಟ್ಟಿದ್ದಾರೆ. ಗಾಯಗೊಂಡ ಅವರನ್ನು ಕೂಡಲೇ ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಆ ವೇಳೆಗಾಗಲೇ ನಂದಿನಿ ಮೃತ ಪಟ್ಟಿದ್ದರು ಎಂದು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ. ಸದ್ಯ ಜಾಲಹಳ್ಳಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

- Advertisement -

Latest News

error: Content is protected !!