- Advertisement -
- Advertisement -
ಉಪ್ಪಿನಂಗಡಿ: ಅಪರಿಚಿತ ಮಹಿಳೊಬ್ಬರ ಮೃತದೇಹ ಉಪ್ಪಿನಂಗಡಿ ಸಮೀಪದ ಪಂಜಳದಲ್ಲಿ ನೇತ್ರಾವತಿ ನದಿಯಲ್ಲಿ ಸೋಮವಾರ ರಾತ್ರಿ ಪತ್ತೆಯಾಗಿದೆ.
ನದಿಯ ಬದಿಯಲ್ಲಿರುವ ಮರದ ಕೊಂಬೆಗೆ ಸಿಲುಕಿದಂತಿರು ವ ಈ ಮೃತದೇಹದಲ್ಲಿ ಕೆಂಪು ಬಣ್ಣದ ರವಿಕೆ ಇದ್ದು, ಹಸಿರು ಬಣ್ಣದ ಸೀರೆ ಅಥವಾ ಲಂಗದಂತಹ ವಸ್ತ್ರ ಕಾಣಿಸಿದೆ.
ಮೃತದೇಹ ಮೇಲ್ನೋಟಕ್ಕೆ ಸಾವನ್ನಪ್ಪಿ ಕೆಲ ದಿನಗಳು ಕಳೆದಂತಿದ್ದು, ಸಂಶಯಾಸ್ಪದ ಸಾವು ಆಗಿರುವ ಸಾಧ್ಯತೆ ಇದೆ. ಶವ ಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
- Advertisement -