Thursday, June 4, 2026
Homeಕರಾವಳಿಮಂಗಳೂರು: ಆಟೋರಿಕ್ಷಾದಲ್ಲಿ ಗಾಂಜಾ ಮಾರಾಟ; ಮೂವರನ್ನು ಬಂಧಿಸಿದ ಪೊಲೀಸರು

ಮಂಗಳೂರು: ಆಟೋರಿಕ್ಷಾದಲ್ಲಿ ಗಾಂಜಾ ಮಾರಾಟ; ಮೂವರನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮಂಗಳೂರು: ಆಟೋರಿಕ್ಷಾದಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.

ಅಜೀಜುದ್ದೀನ್‌ ರಸ್ತೆಯ ಗಣೇಶ್‌(28), ಡೊಂಗರಕೇರಿಯ ರಾಹುಲ್‌ ಗಟ್ಟಿ(25) ಮತ್ತು ಕುದ್ರೋಳಿಯ ಅಭಿಲಾಷ ಎಸ್‌.ಕರ್ಕೇರ(27) ಬಂಧಿತ ಆರೋಪಿಗಳು.

ಬಂಧಿತರಿಂದ  2 ಕೆಜಿ 133 ಗ್ರಾಂ ಗಾಂಜಾ, ಆಟೋರಿಕ್ಷಾ, 3 ಮೊಬೈಲ್‌ ಪೋನ್‌ ಸೇರಿದಂತೆ ಅಂದಾಜು 1.36 ಲ.ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಬರ್ಕೆ ಪೊಲೀಸ್‌ ಇನ್ಸ್‌ಪೆಕ್ಟರ್‌ ನಾಗೇಶ್‌ ಎಸ್‌.ಹಸ್ಲರ್‌, ಪಿಎಸ್‌ಐಗಳಾದ ರೇಖಾ ಆರ್‌, ಶೋಭಾ, ಹೆಡ್‌ಕಾನ್‌ಸ್ಟೆಬಲ್‌ಗ‌ಳಾದ ಚಂದ್ರಹಾಸ ಆಳ್ವ, ಕಾನ್‌ಸ್ಟೆಬಲ್‌ಗ‌ಳಾದ ರಾಘವೇಂದ್ರ, ಪ್ರದೀಪ, ಮಂಜುನಾಥ, ಲಿಖೀತ್ ಕುಮಾರ ಮತ್ತು ನಿತೇಶ್‌ ಪಾಲ್ಗೊಂಡಿದ್ದರು.

- Advertisement -

Latest News

error: Content is protected !!