Saturday, May 18, 2024
Homeಕರಾವಳಿಮಂಗಳೂರಿನ ಕದ್ರಿಯಲ್ಲಿ ಯುವತಿಯ ಮೇಲೆ ಚೂರಿ ಇರಿತ- ರೆಸ್ಟೋರೆಂಟ್ ನಲ್ಲಿನ ಸಿಸಿಟಿವಿ ವಿಡಿಯೋ ವೈರಲ್

ಮಂಗಳೂರಿನ ಕದ್ರಿಯಲ್ಲಿ ಯುವತಿಯ ಮೇಲೆ ಚೂರಿ ಇರಿತ- ರೆಸ್ಟೋರೆಂಟ್ ನಲ್ಲಿನ ಸಿಸಿಟಿವಿ ವಿಡಿಯೋ ವೈರಲ್

spot_img
- Advertisement -
- Advertisement -

ಮಂಗಳೂರು: ಇಲ್ಲಿನ ಕದ್ರಿಯ ಬಾರ್ ಆಯಂಡ್ ರೆಸ್ಟೋರೆಂಟ್ ನಲ್ಲಿ ತನ್ನ ಗೆಳೆಯರೊಂದಿಗೆ ಯುವತಿಯೊಬ್ಬರು ಹೋಟೆಲ್ ನಲ್ಲಿ ಕುಳಿತಿದ್ದಾಗ ಆಕೆಯ ಹಳೆ ಪರಿಚಯದ ಸ್ನೇಹಿತ ಮತ್ತು ಆತನ ಗೆಳೆಯರು ಏಕಾಏಕಿ ದಾಳಿ ನಡೆಸಿದ ಘಟನೆ ವರದಿಯಾಗಿದೆ.ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.

ಗಲಾಟೆಗಿಳಿದ ಯುವಕರು ಹೋಟೆಲ್ ನಲ್ಲಿ ಸಿಕ್ಕ ವಸ್ತುಗಳಿಂದ ಹೊಡೆದಾಟ ನಡೆಸಿದ್ದು, ಈ ವೇಳೆ ಓರ್ವ ಯುವಕನಿಗೆ ಚೂರಿಯಿಂದ ಇರಿಯಲಾಗಿದೆ. ಯುವತಿಯೊಂದಿಗೆ ಇದ್ದ ಯುವಕ ಚೂರಿ ಇರಿತದಿಂದ ಗಾಯಗೊಂಡಿದ್ದಾನೆ.ಪ್ರಕರಣದ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

- Advertisement -
spot_img

Latest News

error: Content is protected !!