Thursday, June 4, 2026
Homeಕರಾವಳಿಉಡುಪಿಉದ್ಯಾವರ ಕ್ರೇನ್ ಡಿಕ್ಕಿಯಾಗಿ ಪಾದಚಾರಿ ಮಹಿಳೆ ಸಾವು

ಉದ್ಯಾವರ ಕ್ರೇನ್ ಡಿಕ್ಕಿಯಾಗಿ ಪಾದಚಾರಿ ಮಹಿಳೆ ಸಾವು

- Advertisement -
- Advertisement -

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಗುಡ್ಡೆಯಂಗಡಿ ಬಳಿ ಕಾರವಾರದ ಮೂಲದ ಪಾದಚಾರಿ ಮಹಿಳೆಗೆ ಕ್ರೇನ್ ಡಿಕ್ಕಿ ಹೊಡೆದು ಅವರು ಮೃತಪಟ್ಟ ಘಟನೆ ಸಂಭವಿಸಿದೆ.

ಕಾರವಾರ ಮೂಲದ ದಿವ್ಯಾ (45) ಮೃತಪಟ್ಟ ಮಹಿಳೆ.

ಘಟನೆಯ ವಿವರ: ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಟಾರ್ಜ್‌ಗೊಂಡ ಪುತ್ರಿಯನ್ನು ಕಾರವಾರದತ್ತ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಉದ್ಯಾವರ ಬಲಾಯಿಪಾದೆ ಬಳಿ ಯು-ಟರ್ನ್ ಪಡೆದು ಗುಡ್ಡೆಯಂಗಡಿ ಬಳಿಯ ಹೊಟೇಲ್‌ಗೆ ಉಪಾಹಾರಕ್ಕಾಗಿ ತೆರಳಿದ್ದರು. ಆ ವೇಳೆ ಪುತ್ರಿ ಕ್ರಿಕೆಟ್‌ ಬ್ಯಾಟ್ ಬೇಕು ಎಂದಿದ್ದಕ್ಕೆ ಮತ್ತೆ ರಸ್ತೆಯನ್ನು ದಾಟಿ ಮತ್ತೊಂದು ಬದಿಗೆ ತೆರಳಲು ಮುಂದಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರ ಸಹಕಾರದಿಂದ ಖಾಸಗಿ ವಾಹನದಲ್ಲಿ ಮಹಿಳೆಯನ್ನು ಉಡುಪಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದರೂ ಯಾವುದೇ ಪ್ರಯೋಜನವಾಗಲಿಲ್ಲ.

ರಾಷ್ಟ್ರೀಯ ಹೆದ್ದಾರಿ 66ರ ಈ ಪರಿಸರದಲ್ಲಿ ಪದೇ ಪದೇ ಅಪಘಾತಗಳಾಗುತ್ತಿದ್ದು, ಸರ್ವಿಸ್ ರಸ್ತೆಯ ಕಾಮಗಾರಿ ಆಗುತ್ತಿದ್ದು ಈ ಕಾಮಗಾರಿ ಆಮೆ ಗತಿಯಿಂದ ಸಾಗುತ್ತಿದ್ದು ಕೂಡಲೇ ಕಾಮಗಾರಿ ಮುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!