Thursday, June 26, 2025
Homeಕರಾವಳಿಮಂಗಳೂರುಮಂಗಳೂರು; ಫೇಸ್ ಬುಕ್ ಫೇಕ್ ಫ್ರೆಂಡ್ ಮಾತು ನಂಬಿ 7.10 ಲಕ್ಷ ರೂ. ಕಳೆದುಕೊಂಡ ಮಹಿಳೆ

ಮಂಗಳೂರು; ಫೇಸ್ ಬುಕ್ ಫೇಕ್ ಫ್ರೆಂಡ್ ಮಾತು ನಂಬಿ 7.10 ಲಕ್ಷ ರೂ. ಕಳೆದುಕೊಂಡ ಮಹಿಳೆ

spot_img
- Advertisement -
- Advertisement -

ಮಂಗಳೂರು; ಫೇಸ್ ಬುಕ್ ಫೇಕ್ ಫ್ರೆಂಡ್ ಮಾತು ನಂಬಿ ಮಹಿಳೆ  7.10 ಲಕ್ಷ ರೂ. ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರೆಗೆ ಡಾ| ತುಷಾರ್‌ ಪಾಟೀಲ್‌ ಎನ್ನುವ ಹೆಸರಿನ ಫೇಸ್‌ಬುಕ್‌ ಖಾತೆಯಿಂದ ಹಾಯ್‌ ಎನ್ನುವ ಮೆಸೇಜ್‌ ಬಂದಿದ್ದು, ತಾನು ಯು ಹೆಲ್ತ್‌ ಮಿಯಾಮಿ ಫ್ಲೋರಿಡಾದಲ್ಲಿ ನ್ಯೂರೋರಜಿಸ್ಟ್‌ ಆಗಿದ್ದೇನೆ. ಮದುವೆ ಅಗಿ ವಿಚ್ಛೇದನವಾಗಿದ್ದು, ಒಂದು ಮಗುವಿದೆ ಎಂದು ತಿಳಿಸಿದ್ದ. ಬಳಿಕ ವಾಟ್ಸಾಪ್‌ ಸಂಖ್ಯೆ ಪಡೆದು ಅದಕ್ಕೆ ಮೆಸೇಜ್‌ ಮಾಡಿ, ನಿಮ್ಮ ಸ್ನೇಹಕ್ಕಾಗಿ ಗಿಫ್ಟ್‌ ಆಗಿ ಪ್ಲಾಟಿನಂ ವಾಚ್‌, ಡೈಮಂಡ್‌, ಲ್ಯಾಪ್‌ಟಾಪ್‌, ಐಫೋನ್‌, 90 ಸಾವಿರ ಯುಎಸ್‌ ಡಾಲರ್‌ ಹಾಗೂ ಬಂಗಾರ ಕಳುಹಿಸಿಕೊಡುತ್ತೇನೆ. ವಿಮಾನ ನಿಲ್ದಾಣದಿಂದ ಕರೆ ಬರಲಿದೆ ಎಂದು ತಿಳಿಸಿದ್ದಾನೆ.

ಅದರಂತೆ ಮರುದಿನ ಕರೆ ಬಂದಿದ್ದು, ಕರೆ ಮಾಡಿದವರು ಡಾ| ತುಷಾರ್‌ ಪಾಟೀಲ್‌ ಅವರಿಂದ ಗಿಫ್ಟ್‌ ಬಂದಿದೆ. ಸೆಕ್ಯೂರಿಟಿ ಡಿಪಾಸಿಟ್‌ ಹಾಗೂ ಲಾಂಡರಿಂಗ್‌ ಕ್ಲಿಯರೆನ್ಸ್‌ಗಾಗಿ ಹಣ ಕಳುಹಿಸುವಂತೆ ತಿಳಿಸಿದ್ದಾರೆ. ಇದನ್ನು ನಂಬಿ ವಿವಿಧ ಖಾತೆಗಳಿಗೆ 7.10 ಲಕ್ಷ ರೂ. ವರ್ಗಾಯಿಸಿದ್ದಾರೆ. ಆದರೆ ಗಿಫ್ಟ್‌ ನೀಡದೆ ವಂಚನೆ ಮಾಡಿದ್ದಾರೆ ಎಂದು ಪಾಂಡೇಶ್ವರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!