25 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ತಲೆ ಜಜ್ಜಿ ತೀವ್ರ ಹಲ್ಲೆ

ಚಂಡೀಗಢ: 25 ವರ್ಷದ ಮಹಿಳೆ ಮೇಲೆ ನಾಲ್ವರು ಕಾಮುಕರು ಅತ್ಯಾಚಾರ ನಡೆಸಿ, ನಂತರ ಆಕೆಗೆ ಕ್ರೂರವಾಗಿ ಥಳಿಸಿ ತಲೆಗೆ ತೀವ್ರವಾದ ಗಾಯ ಮಾಡಿ ಥಳಿಸಿರುವ ಘಟನೆ ಗುರುಂಗಾವ್ ನ ಡಿಎಲ್ ಎಫ್ 2ನೇ ಹಂತದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ 1 ಗಂಟೆಯೊಳಗೆ ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು, ಬಂಧಿತರು 20 ರಿಂದ 25 ವರ್ಷ ವಯಸ್ಸಿನವರಾಗಿದ್ದಾರೆ. ಘಟನೆ ನಡೆದಿದೆ ಎಂದು ಎಸಿಪಿ ತಿಳಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಮೂವರು ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ನಾಲ್ವರು ಆರೋಪಿಗಳಲ್ಲಿ ಒಬ್ಬ ಗುರುಗ್ರಾಮದ ಸಿಕಂದರ್‌ಪುರ ಮೆಟ್ರೋ ನಿಲ್ದಾಣದ ಬಳಿ ಶನಿವಾರ ರಾತ್ರಿ ಮಹಿಳೆಯನ್ನು ಭೇಟಿಯಾಗಿ, ತಾನು ಕೆಲಸ ಮಾಡುತ್ತಿದ್ದ ರಿಯಲ್‌ಎಸ್ಟೇಟ್‌ ಕಚೇರಿಗೆ ಕರೆದೊಯ್ದಿದ್ದ. ನಂತರ ಅಲ್ಲಿ ನಾಲ್ವರೂ ಕೂಡಿಕೊಂಡು ಅತ್ಯಾಚಾರ ಮಾಡಿದ್ದಾರೆ. ತನ್ನ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಪ್ರತಿರೋಧಿಸಿದಾಗ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಕೊನೆಗೆ ತಲೆಯನ್ನು ಗೊಡೆಗೆ ಬಡಿದಿದ್ದಾರೆ. ಇದರಿಂದ ಯುವತಿಯ ತಲೆಗೆ ಆಳವಾದ ಗಾಯವಾಗಿದ್ದು, ಆಕೆಯನ್ನು ಗುರುಗ್ರಾಮದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.