- Advertisement -
![]()
- Advertisement -
ಬೆಂಗಳೂರಿನ ಕಾಡುಗೋಡಿ ಸಮೀಪದ ದೊಡ್ಡಬನಹಳ್ಳಿಯಲ್ಲಿ ಮನೆ ಸ್ವಚ್ಛಗೊಳಿಸುವ ವೇಳೆಯಲ್ಲಿ ಮಹಿಳೆಯೊಬ್ಬಳು ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತಪಟ್ಟ ಮಹಿಳೆ ಖುಷ್ಬೂ ಅಶೀಷ್ ತ್ರಿವೇದಿ (31). ಮೂಲತಃ ಗುಜರಾತಿಯಾಗುವರು ಅವರು ಬೆಂಗಳೂರಿನ ದೊಡ್ಡಬನಹಳ್ಳಿಯ ಬಿಡಿಎ ವಿಂಧ್ಯಗಿರಿ ಅಪಾರ್ಟಮೆಂಟ್‌ನಲ್ಲಿ ನೆಲೆಸಿದ್ದರು. ಇತ್ತೀಚೆಗೆ ಖುಷ್ಬೂ ಅವರು ಆಶೀಶ್ ಅವರನ್ನು ಮದುವೆಯಾಗಿದ್ದರು.
ಖುಷ್ಬೂ ಅವರು ತಮ್ಮ ಪ್ಲಾಟ್ ಕಾರಿಡಾರ್ ಅನ್ನು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಆಯಾತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಗಂಭೀರ ಗಾಯವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


