Saturday, April 20, 2024
Homeಇತರಗಂಡನ ಅತಿಯಾದ ಪ್ರೀತಿ ತನ್ನನ್ನು ಉಸಿರು ಕಟ್ಟಿಸುತ್ತಿದೆ ಎಂದು ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ ಹೆಂಡತಿ

ಗಂಡನ ಅತಿಯಾದ ಪ್ರೀತಿ ತನ್ನನ್ನು ಉಸಿರು ಕಟ್ಟಿಸುತ್ತಿದೆ ಎಂದು ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ ಹೆಂಡತಿ

spot_img
- Advertisement -
- Advertisement -

ಲಕ್ನೋ: ಪತಿಯ ಕಿರುಕುಳಕ್ಕೆ ಪತ್ನಿಯರು ವಿಚ್ಛೇದನ ಕೇಳುವ ಸಂಗತಿ ಇಲ್ಲಿಯವರೆಗೂ ಸಾಮಾನ್ಯವಾಗಿತ್ತು. ಆದರೆ, ಇದಕ್ಕೊಂದು ವಿಪರ್ಯಾಸ ಘಟನೆಯೊಂದು ನಡೆದಿದೆ. ಇಲ್ಲಿ ಪತಿ ಜಗಳವಾಡುವುದಿಲ್ಲ ಎಂಬ ಕಾರಣಕ್ಕೆ ಪತ್ನಿಯೊಬ್ಬರು ವಿಚ್ಛೇದನ ಕೇಳುತ್ತಿದ್ದಾರೆ.

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದ್ದು, ತನ್ನ ಪತಿ ತನ್ನನ್ನು ತುಂಬಾ ಪ್ರೀತಿಸುತ್ತಾನೆ, ಇದುವರೆಗೂ ಜಗಳ ಮಾಡಿಲ್ಲ. ತಾನು ತಪ್ಪು ಮಾಡಿದರೂ ಕ್ಷಮಿಸಿ ಪ್ರೀತಿ ಮಾಡುತ್ತಾನೆ. ಒಮ್ಮೊಮ್ಮೆ ಮನೆ ಕೆಲಸ, ಅಡುಗೆ ಕೆಲಸವನ್ನೂ ತಾನೇ ಮಾಡುತ್ತಾನೆ. ನನಗೆ ಯಾವೊಂದು ಕೆಲಸ ಮಾಡಲೂ ಬಿಡಲ್ಲ. ನಾನು ವಾದ ಮಾಡಿ, ಜಗಳವಾಡಿದರೂ ಅದಕ್ಕೂ ಬೈಯ್ಯುವುದೂ ಇಲ್ಲ. ಹೀಗೆ ಎಲ್ಲವನ್ನು ಸಹಿಸಿಕೊಂಡು ಅತಿಯಾಗಿ ಪ್ರೀತಿಸುವ ಗಂಡನ ಪ್ರೀತಿ ತನಗೆ ಉಸಿರುಕಟ್ಟಿದಂತಾಗುತ್ತಿದೆ. ಇದೇ ಕಾರಣಕ್ಕೆ ತಮಗೆ ವಿಚ್ಛೇದನ ನೀಡುವಂತೆ ಕೋರಿದ್ದಾಳೆ.

ಇದನ್ನು ಕೇಳಿ ಸ್ವತಃ ನ್ಯಾಯಾಧೀಶರೇ ಕಕ್ಕಾಬಿಕ್ಕಿಯಾಗಿದ್ದು, ವಿಚ್ಛೇದನಕ್ಕೆ ಇದು ಸಮರ್ಪಕ ಕಾರಣವಲ್ಲ ಎಂದು ಅರ್ಜಿ ವಜಾಗೊಳಿಸಿದ್ದಾರೆ.

ಕೋರ್ಟ್ ಅರ್ಜಿ ತಿರಸ್ಕರಿಸಿದ ಬಳಿಕ ಸುಮ್ಮನಾಗದ ಮಹಿಳೆ, ಸ್ಥಳೀಯ ಪಂಚಾಯಿತಿಯಲ್ಲಿ ಚರ್ಚಿಸಿದ್ದು, ಆಗ ಊರಿನ ಮುಖಂಡರು ಸಹ ಅಸಮರ್ಥತೆ ಹೊರ ಹಾಕಿದ್ದಾರೆ. ಪತಿಯ ಪ್ರೀತಿಯನ್ನು ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಪತಿ ಎಂದೂ ನನ್ನ ಮೇಲೆ ಕೂಗಾಡಲಿಲ್ಲ. ಯವುದೇ ವಿಷಯದ ಬಗ್ಗೆ ನನಗೆ ನಿರಾಸೆ ಮಾಡಿಲ್ಲ. ಇಂತಹ ವಾತಾವರಣದಿಂದಾಗಿ ನನಗೆ ಉಸಿರುಗಟ್ಟಿದಂತಗುತ್ತಿದೆ. ಕೆಲವೊಮ್ಮೆ ಅವನೇ ಅಡುಗೆ ಮಾಡಿ ನನಗೆ ಬಡಿಸುತ್ತಾನೆ. ಮನೆ ಕೆಲಸ ಮಾಡಲು ಸಹ ಸಹಾಯ ಮಾಡುತ್ತಾನೆ. ವಿವಾಹವಾಗಿ 18 ತಿಂಗಳು ಕಳೆದರೂ, ಈ ವರೆಗೆ ಪತಿಯೊಂದಿಗೆ ಒಂದು ಬಾರಿಯೂ ಜಗಳವಾಡಿಲ್ಲ ಎಂದು ವರದಿಯಲ್ಲಿ ಮಹಿಳೆ ಉಲ್ಲೇಖಿಸಿದ್ದಾಳೆ.

- Advertisement -
spot_img

Latest News

error: Content is protected !!