Saturday, April 27, 2024
Homeತಾಜಾ ಸುದ್ದಿ“ಮನೆಯಲ್ಲಿ ಹೆಂಡ್ತಿ ಹೊಡಿತಾಳೆ ಪ್ಲೀಸ್ ! ಕಾಪಾಡಿ” : ಕೋರ್ಟ್ ಮೊರೆ ಹೋದ ಹೆಡ್ ಮಾಸ್ಟರ್

“ಮನೆಯಲ್ಲಿ ಹೆಂಡ್ತಿ ಹೊಡಿತಾಳೆ ಪ್ಲೀಸ್ ! ಕಾಪಾಡಿ” : ಕೋರ್ಟ್ ಮೊರೆ ಹೋದ ಹೆಡ್ ಮಾಸ್ಟರ್

spot_img
- Advertisement -
- Advertisement -

ರಾಜಸ್ಥಾನ: ತನ್ನ ಪತ್ನಿ ಹೊಡಿತಾಳೆ ಪ್ಲೀಸ್ ಕಾಪಾಡಿ ಎಂದು ಸ್ಕೂಲ್ ಹೆಡ್ ಮಾಸ್ಟರ್ ಒಬ್ಬರು ಕೋರ್ಟ್ ಮೊರೆ ಹೋಗಿರುವ ವಿಚಿತ್ರ ಪ್ರಸಂಗ ನಡೆದಿದೆ.

ರಾಜಸ್ಥಾನದ ಹೆಡ್​ಮಾಸ್ಟರ್​ ಅಜಿತ್​ ಸಿಂಗ್​ ಅವರು ಸೋನೆಪತ್​ನ ಸುಮನ್​ ಎಂಬುವರ ಜೊತೆ 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ 9 ವರ್ಷದ ಒಂದು ಗಂಡು ಮಗುವಿದೆ. ಆರಂಭದ ದಿನಗಳಲ್ಲಿ ಚೆನ್ನಾಗಿದ್ದ ತನ್ನ ಹೆಂಡತಿ ಒಂದು ವರ್ಷದಿಂದ ನನ್ನನ್ನು ದಿನವೂ ಹೊಡೆದು ಹಿಂಸಿಸುತ್ತಿದ್ದಾಳೆ. ಕಳೆದ 1 ವರ್ಷದಿಂದ ನನ್ನ ಹೆಂಡತಿಯ ಕಿರುಕುಳ ತಾಳಲಾಗುತ್ತಿಲ್ಲ. ಸಮಾಜಕ್ಕೆ ಅಂಜಿ ನಾನು ಈವರೆಗೂ ಸುಮ್ಮನಿದ್ದೆ. ಅಲ್ಲದೇ, ನನ್ನ ಮಗನ ಜೀವನ ಹಾಳಾಗಬಾರದು ಎಂದು ಇದನ್ನು ನಾನು ಯಾರಿಗೂ ಹೇಳಿರಲಿಲ್ಲ. ಈ ಮಧ್ಯೆ ಆಕೆಯ ಕಾಟ ಹೆಚ್ಚಾಗಿದೆ. ಒಂದು ತಿಂಗಳಿಂದ ನಾನು ಮನೆಗೇ ಹೋಗಿಲ್ಲ. ಅಜ್ಞಾತವಾಗಿ ಜೀವನ ಸಾಗಿಸುತ್ತಿದ್ದೇನೆ ಎಂದು ಅಜಿತ್​ ಸಿಂಗ್​ ಹೇಳಿಕೊಂಡಿದ್ದಾರೆ.

ತನ್ನ ಹೆಂಡತಿ ಹಲ್ಲೆ ನಡೆಸುತ್ತಿರುವ ಮನೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಅಜಿತ್​ ಸಿಂಗ್​ ಕೋರ್ಟ್​ಗೆ ನೀಡಿದ್ದಾರೆ. ವಿಡಿಯೋದಲ್ಲಿರುವಂತೆ ಮಹಿಳೆ ಕೈಯಲ್ಲಿ ಬ್ಯಾಟ್​ ಹಿಡಿದುಕೊಂಡು ಅಜಿತ್​ ಸಿಂಗ್​ರನ್ನು ಅಟ್ಟಿಸಿಕೊಂಡು ಬಂದು ಹೊಡೆಯುತ್ತಿರುವುದು ದಾಖಲಾಗಿದೆ. ಹೊಡೆಯಬೇಡ ಎಂದು ಎಷ್ಟೇ ಕೇಳಿಕೊಂಡರೂ ಬಿಡದ ಆ ಮಹಿಳೆ ಥಳಿಸಿದ್ದಾರೆ. ಈ ವೇಳೆ ಮಗನೂ ಕೂಡ ತಂದೆಯ ಸಹಾಯಕ್ಕೆ ಬಂದರೂ ಸಹ ಅಜಿತ್​ಸಿಂಗ್​ ಮೇಲೆ ನಿರಂತರ ಹಲ್ಲೆ ನಡೆಸಿದ್ದಾಳೆ.

ತನ್ನ ಹೆಂಡತಿ ಈ ರೀತಿ ಮಾಡಲು ಕಾರಣ ತಮ್ಮ ಮನೆ. ನನ್ನ ಹೆಸರಿನಲ್ಲಿರುವ ಮನೆಯನ್ನು ಅವಳ ಹೆಸರಿಗೆ ಮಾಡಿಸುವಂತೆ ಪ್ರತಿದಿನವೂ ತಕರಾರು ತೆಗೆಯುತ್ತಾಳೆ. ಈ ವೇಳೆ ಕೋಪಗೊಂಡು ದಿನವೂ ಹೊಡೆಯುತ್ತಾಳೆ. ಇದಕ್ಕೆ ಅಮೆರಿಕಾದಲ್ಲಿರುವ ಆಕೆಯ ಅಣ್ಣನ ಬೆಂಬಲವಿದೆ. ಹೀಗಾಗಿ ಆಕೆ ನನ್ನನ್ನು ಹಿಂಸಿಸುತ್ತಿದ್ದಾಳೆ ಎಂದು ಅಜಿತ್​ಸಿಂಗ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

- Advertisement -
spot_img

Latest News

error: Content is protected !!