Thursday, May 2, 2024
Homeಅಪರಾಧಹೆಂಡತಿಯನ್ನು ಪ್ರಶ್ನಿಸುತ್ತಿದ್ದ ವೇಳೆ ಅನ್ಯಕೋಮಿನ ಯುವಕನಿಂದ ಗಂಡನಿಗೆ ಹಲ್ಲೆ; ಸಿರಾಜುದ್ದೀನ್‌ ಅಲಿಯಾಸ್ ಸೂರಜ್ ನಿಂದ ಕೃತ್ಯ:...

ಹೆಂಡತಿಯನ್ನು ಪ್ರಶ್ನಿಸುತ್ತಿದ್ದ ವೇಳೆ ಅನ್ಯಕೋಮಿನ ಯುವಕನಿಂದ ಗಂಡನಿಗೆ ಹಲ್ಲೆ; ಸಿರಾಜುದ್ದೀನ್‌ ಅಲಿಯಾಸ್ ಸೂರಜ್ ನಿಂದ ಕೃತ್ಯ: ಪ್ರಕರಣ ದಾಖಲು

spot_img
- Advertisement -
- Advertisement -

ಬೈಂದೂರು: ಸುರೇಶ್ ಭಟ್ ಎನ್ನುವಾತ ತನ್ನ ಹೆಂಡತಿಯನ್ನು ಪ್ರಶ್ನಿಸುತ್ತಿದ್ದ ವೇಳೆ ಅನ್ಯಕೋಮಿನ ಯುವಕ ಆತನನ್ನು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಗೈದು, ಬೆದರಿಕೆಯೊಡ್ಡಿದ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ಯಿಯಲ್ಲಿ ನಡೆದಿದೆ.

ಘಟನೆಯ ವಿವರ: ಪುತ್ತೂರು ಕೆಮ್ಮಾಯಿ ನಿವಾಸಿ ಸುರೇಶ್ ಭಟ್ ಎಂಬವರು ಅವರ ಸ್ನೇಹಿತರನ್ನು ಮಾತನಾಡಿಸುವ ಸಲುವಾಗಿ ಕಂಬದ ಕೋಣೆ ರೈಲ್ವೇ ಗೇಟಿನ ಹತ್ತಿರ ವಾಹನ ನಿಲ್ಲಿಸಿದ್ದರು. ಈ ವೇಳೆಯಲ್ಲಿ ಸುರೇಶ್ ಅವರ ಪತ್ನಿ ಸ್ನೇಹಿತ ಸಿರಾಜುದ್ದೀನ್ ಎಂಬ ಅನ್ಯ ಕೋಮಿನ ಯುವಕನೊಂದಿಗೆ ನ್ಯಾನೋ ಕಾರಿನಲ್ಲಿ ಕಾಣಸಿಕ್ಕಿರುತ್ತಾರೆ. ಸುರೇಶ್ ತನ್ನ ವಾಹನದಿಂದ ಇಳಿದು ಹೆಂಡತಿಯ ಬಳಿ ಪ್ರಶ್ನಿಸುತ್ತಿದ್ದ ವೇಳೆ ಸಿರಾಜುದ್ದೀನ್ ಏಕಾಏಕಿಯಾಗಿ ಬಂದು ಇದನ್ನು ಪ್ರಶ್ನಿಸಲು ನೀನು ಯಾರು ಎಂಬುದಾಗಿ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ್ದಾನೆ. ಹಲ್ಲೆಗೊಳಗಾದ ಸುರೇಶ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಪುತ್ತೂರಿನ ಸಿಜು ಅಲಿಯಾಸ್ ಸಿರಾಜುದ್ದೀನ್ ಯಾನೆ ಬೈಂದೂರಿನ ಸೂರಜ್‌ನನ್ನು ಬಂಧಿಸುವಲ್ಲಿ ಬೈಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿ ಸಿಜು ಅಲಿಯಾಸ್ ಸೂರಜ್ ಹಿನ್ನೆಲೆ: ಸೂರಜ್ ಎನ್ನುವ ಹಿಂದೂ ಹೆಸರಿನಿಂದ ಹಿಂದೂ ಹುಡುಗಿಯರ ಬಾಳಲ್ಲಿ ಚೆಲ್ಲಾಟವಾಡುವ ಈತ ಮೂಲತ: ಪುತ್ತೂರಿನ ಕುರಿಯ ಬಳ್ಳಮಜಲು ನಿವಾಸಿ. ಪುತ್ತೂರಿನಲ್ಲಿ ಆಂಬ್ಯುಲೆನ್ಸ್ ಡ್ರೈವರ್ ಆಗಿದ್ದ ಈತನ ಮೇಲೆ ಪುತ್ತೂರು ಆಸು ಪಾಸಿನಲ್ಲಿ ಅನೇಕ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದ ಎಂಬ ಆರೋಪವಿದೆ. ಅಷ್ಟೇಅಲ್ಲದೆ ಈತನು ಕೊರಳಿಗೆ ಚಿನ್ನದ ಮಾಲೆ ಧರಿಸಿದ್ದು, ಕೈಯಲ್ಲಿ ನೂಲು ಕಟ್ಟಿಕೊಂಡು ಹಿಂದೂವಿನ ರೀತಿಯಲ್ಲಿ ವರ್ತಿಸಿ ಸಿಜು ಎಂದು ಪರಿಚಯಿಸಿಕೊಂಡಿದ್ದಾನೆ.ಈತ ಕೊರೋನಾ ಸಮಯದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿ ಸಿಕ್ಕಿ ಬಿದ್ದಿರುತ್ತಾನೆ. ಅಷ್ಟೇಅಲ್ಲದೆ ’ಜೈ ಭಾರತ್’ ಎಂಬ ಆಂಬ್ಯುಲೆನ್ಸ್ ಅನ್ನು ಲಾಡ್ಜ್ ತರ ಉಪಯೋಗಿಸಿ, ಕುದುರೆ ವ್ಯಾಪಾರ ನಡೆಸುತ್ತಿದ್ದನು ಎಂಬ ಆರೋಪ ಕೂಡ ಕೇಳಿಬಂದಿದೆ.

ಇತ್ತೀಚೆಗೆ ಸುಮಾರು ಎಂಟು ತಿಂಗಳಿನಿಂದ ದೂರುದಾರರಾದ ಸುರೇಶ್ ಭಟ್ ಮತ್ತು ಅವರ ಪತ್ನಿಯ ನಡುವೆ ಸಂಬಂಧ ಬಿರುಕುಗೊಳಿಸಿ ಅವರನ್ನು ಬೇರೆ ಬೇರೆ ಮಾಡಲು ಪ್ರಯತ್ನಿಸುತ್ತಿದ್ದ. ಆ ಬಳಿಕ ಸುರೇಶ್ ಭಟ್‌ರವರ ಪತ್ನಿ ತವರೂರಿಗೆ ಹೋಗಿರುತ್ತಾರೆ. ತನ್ನ ಚಾಳಿಯನ್ನು ಬಿಡದ ಈತ ಆರು ತಿಂಗಳಿನಿಂದ ಪುತ್ತೂರಿನ ಕಡೆ ಸುಳಿಯದೆ, ಅವರ ಜೊತೆಯಲ್ಲೇ ನೆಪ ಮಾತ್ರಕ್ಕೆ ಕಾರಿನ ಡ್ರೈವರ್ ಆಗಿ ಅವರ ಜೊತೆ ಬೈಂದೂರಿನಲ್ಲಿ ವಾಸವಾಗಿರುತ್ತಾನೆ. ತನಗೆ ತಾನೇ ಸೂರಜ್ ಎಂಬ ಹೆಸರನ್ನಿಟ್ಟು ಬೈಂದೂರಿನ ಸೂರಜ್ ಆಗಿ ಸ್ಥಳೀಯರಿಗೆ ಪರಿಚಿತನಾಗಿದ್ದಾನೆ.

ಆದರೆ ಇತ್ತೀಚೆಗೆ ಈ ಬಗ್ಗೆ ಎಚ್ಚೆತ್ತುಕೊಂಡ ಹಿಂದೂ ಸಂಘಟನೆಗಳು ಆರೋಪಿ ಸಿಜು ಅಲಿಯಾಸ್ ಸಿರಾಜುದ್ದೀನ್ ಯಾನೆ ಸೂರಜ್‌ನನ್ನು ಬಂಧಿಸಿ, ಈತನನ್ನು ವಿಚಾರಣೆಗೆ ಒಳಪಡಿಸಿ ಈತನ ಅಕ್ರಮ ದಂಧೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಈತ ಬೇರೆ ಬೇರೆ ಹೆಸರನ್ನಿಟ್ಟುಕೊಂಡು ಹಿಂದೂ ಹೆಣ್ಣು ಮಕ್ಕಳನ್ನು ಪುಸಲಾಯಿಸಿ, ಲವ್ ಜಿಹಾದ್ ಮಾಡುತ್ತಿದ್ದಾನೆ ಮತ್ತು ಸುರೇಶ್ ಭಟ್‌ರವರ ಪ್ರಕರಣದಲ್ಲಿ ಅವರ ಕುಟುಂಬವನ್ನು ಲವ್‌ಜಿಹಾದ್ ಗೆ ಪ್ರೇರೇಪಿಸುತ್ತಿದ್ದಾನೆ ಎಂಬ ಸಂಶಯ ಇರುವ ಕಾರಣ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಸಿರಾಜುದ್ದೀನ್‌ನನ್ನು ತನಿಖೆ ಮಾಡುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!