Saturday, May 18, 2024
Homeಕ್ರೀಡೆವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಸರ್ ಎವರ್ಟನ್ ವೀಕ್ಸ್ ನಿಧನ

ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಸರ್ ಎವರ್ಟನ್ ವೀಕ್ಸ್ ನಿಧನ

spot_img
- Advertisement -
- Advertisement -

ಬ್ರಿಡ್ಜ್‌ಟೌನ್‌: ವೆಸ್ಟ್‌ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಎವರ್ಟನ್‌ ವೀಕ್ಸ್‌ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎವರ್ಟನ್, ಬಾರ್ಬಡೋಸ್‌ನ ಕ್ರೈಸ್ಟ್‌ ಚರ್ಚ್‌ನಲ್ಲಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

‘ಐಸಿಸಿ ಹಾಲ್‌ ಆಫ್‌ ಫೇಮ್’‌ ಗೌರವಕ್ಕೆ ಭಾಜನರಾಗಿದ್ದ ಎವರ್ಟನ್ ಅವರು ಈ ಸಮಿತಿಯ ಸದಸ್ಯರೂ ಆಗಿದ್ದರು. ಕೋಚ್‌, ವಿಶ್ಲೇಷಕ, ತಂಡದ ಮ್ಯಾನೇಜರ್‌, ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಪಂದ್ಯದ ರೆಫರಿಯಾಗಿಯೂ ಕೆಲಸ ಮಾಡಿದ್ದರು.

22 ವರ್ಷ ವಯಸ್ಸಿಗೆ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದ ಎವರ್ಟನ್‌, ಫ್ರಾಂಕ್‌ ವಾರೆಲ್‌ ಮತ್ತು ಕ್ಲೈಡ್‌ ವಾಲ್ಕಾಟ್‌ ಅವರು ಸಮಕಾಲೀನ ಕ್ರಿಕೆಟಿಗರಾಗಿದ್ದಾರೆ. ಇವರೆಲ್ಲಾ 1948ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಎವರ್ಟನ್ 48 ಟೆಸ್ಟ್‌ ಪಂದ್ಯಗಳನ್ನು ಆಡಿದ್ದರು. 58.61ರ ಸರಾಸರಿಯಲ್ಲಿ 4,455ರನ್‌ ಕಲೆಹಾಕಿದ್ದರು.

ಟೆಸ್ಟ್‌ನಲ್ಲಿ ಸತತ ಐದು ಶತಕಗಳನ್ನು ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. 1948ರಲ್ಲಿ ಅವರಿಂದ ಈ ಸಾಧನೆ ಮೂಡಿ ಬಂದಿತ್ತು. ಜಮೈಕಾದಲ್ಲಿ ನಡೆದಿದ್ದ ಇಂಗ್ಲೆಂಡ್‌ ಎದುರಿನ ಪಂದ್ಯದಲ್ಲಿ 141ರನ್‌ ಬಾರಿಸಿದ್ದ ಅವರು ಭಾರತದಲ್ಲಿ ನಡೆದಿದ್ದ ಟೆಸ್ಟ್‌ ಸರಣಿಯಲ್ಲೂ ಮೋಡಿ ಮಾಡಿದ್ದರು.

ಟೆಸ್ಟ್‌ನಲ್ಲಿ ಅತಿವೇಗವಾಗಿ 1,000 ರನ್‌ ಪೂರೈಸಿದ ಸಾಧನೆಯನ್ನೂ ಎವರ್ಟನ್‌ ಮಾಡಿದ್ದರು. ಇದಕ್ಕಾಗಿ 12 ಇನಿಂಗ್ಸ್‌ ತೆಗೆದುಕೊಂಡಿದ್ದರು.

- Advertisement -
spot_img

Latest News

error: Content is protected !!