Sunday, June 7, 2026
Homeಕರಾವಳಿಬೆಳ್ತಂಗಡಿ: ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ಬಂಧನ

ಬೆಳ್ತಂಗಡಿ: ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ಬಂಧನ

- Advertisement -
- Advertisement -

ಬೆಳ್ತಂಗಡಿ: ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಪಡಂಗಡಿಯ ಲಾಡಿ ಮನೆ ನಿವಾಸಿ ಹಮೀದ್ @ ಜಪಾರ್ ಹಮೀದ್ @ ಕುಂಹಿಮೋನು ಬಂಧಿತ ಆರೋಪಿ.

ಈತನನ್ನು ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕರು ಬಿ ಜಿ ಸುಬ್ಬಾಪೂರ್ ಮಠ, ಉಪ ನೀರಿಕ್ಷಕರು ಮುರಳೀಧರ್ ಮತ್ತು  ಯಲ್ಲಪ್ಪ ರವರ ನಿರ್ದೇಶನದಂತೆ ಠಾಣಾ ಹೆಚ್ ಸಿ 418 ವ್ರಷಭ, ಹೆಚ್ ಸಿ 863 ಬೆಣ್ಣಿಚ್ಚನ್, ಮತ್ತು ಪಿಸಿ 2398  ಮುನಿಯ ನಾಯ್ಕ್, ಪಿ ಸಿ 433 ಸುನಿಲ್ ರವರು  ಪಡಂಗಡಿ ಎಂಬಲ್ಲಿಂದ   ದಸ್ತಗಿರಿ ಮಾಡಿ   ನ್ಯಾಯಾಧಿಶರ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿ ಮಂಗಳೂರ್ ಜೈಲಿಗೆ ನೀಡಿರುತ್ತಾರೆ.

ಈತನ ಮೇಲೆ  ದ. ಕ ಜಿಲ್ಲೆಯ ಬಂಟ್ವಾಳ, ಉಪ್ಪಿನಂಗಡಿ, ಕಡಬ, ಪುತ್ತೂರು, ವೇಣೂರ್, ಧರ್ಮಸ್ಥಳ, ಪುಂಜಾಲಕಟ್ಟೆ, ಮಂಗಳೂರು ನಗರ,  ಬಂದರು ಠಾಣೆ, ಹೊರ ಜಿಲ್ಲೆಗಳಾದ ಹಾಸನದ ಬೇಲೂರು ಚಿಕ್ಕಮಂಗಳೂರು ಜಿಲ್ಲೆ N. R ಪುರ, ಕೊಪ್ಪ, ಹರಿಹರ ಪುರ, ಚಿಕ್ಕಮಂಗಳೂರು , ಮೂಡಿಗೆರೆ ,ಉಡುಪಿ ಜಿಲ್ಲೆ  ಪಡುಬಿದ್ರೆ ಮಡಿಕೇರಿ  ಹಾಗೂ ಹೊರ ರಾಜ್ಯ ಕೇರಳದಲ್ಲಿ ಸುಮಾರು 34 ಕಳ್ಳತನಾದ ಪ್ರಕರಣಗಳು ಇರುತ್ತದೆ.

- Advertisement -

Latest News

error: Content is protected !!