Thursday, June 4, 2026
Homeಕರಾವಳಿಮಂಗಳೂರು: ಜೋಕಟ್ಟೆಯಲ್ಲಿ  ಮನೆ ಮೇಲೆ ಕುಸಿದು ಬಿದ್ದ ತಡೆಗೋಡೆ; ನೆಂಟರ ಮನೆಗೆಂದು ಬಂದಿದ್ದ ಬಾಲಕ ಸಾವು

ಮಂಗಳೂರು: ಜೋಕಟ್ಟೆಯಲ್ಲಿ  ಮನೆ ಮೇಲೆ ಕುಸಿದು ಬಿದ್ದ ತಡೆಗೋಡೆ; ನೆಂಟರ ಮನೆಗೆಂದು ಬಂದಿದ್ದ ಬಾಲಕ ಸಾವು

- Advertisement -
- Advertisement -

ಮಂಗಳೂರು: ಮನೆ ಮೇಲೆ ತಡೆಗೋಡೆ ಕುಸಿದು ಬಿದ್ದ ಪರಿಣಾಮ ನೆಂಟರ ಮನೆಗೆಂದು ಬಂದಿದ್ದ ಬಾಲಕ ಸಾವನ್ನಪ್ಪಿರುವ ಘಟನೆ ಸುರತ್ಕಲ್ ನ ಜೋಕಟ್ಟೆಯಲ್ಲಿ ಗುರುವಾರ ಮುಂಜಾನೆ ನಡೆದಿದೆ. ಭಾರೀ ಗಾಳಿ-ಮಳೆಗೆ  ಮನೆ ಮೇಲೆ ತಡೆಗೋಡೆ ಕುಸಿದು ಬಾಲಕ ಸಾವನ್ನಪ್ಪಿದ್ದಾನೆ.ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್ (17) ಮೃತ ಬಾಲಕ. 

ಇನ್ನು  ಬಾಲಕ ಶೈಲೇಶ್ ನೆಂಟರ ಮನೆಗೆಂದು ಬಂದಿದ್ದ ಎನ್ನಲಾಗಿದೆ.  ಶೈಲೇಶ್ ಸಾವಿನಿಂದಾಗಿ ಇದರೊಂದಿಗೆ ಜಿಲ್ಲೆಯಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ. ಈ ಬಾರಿ ಮುಂಗಾರು ಮಳೆ ದಕ್ಷಿಣಕನ್ನಡದ ಸಂಕಷ್ಟ ತಂದಿದ್ದು, ಮಳೆಯಿಂದಾಗಿ ಅತೀ ಹೆಚ್ಚು ಸಾವು ಸಂಭವಿಸಿದೆ.ಇನ್ನು ಇಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

- Advertisement -

Latest News

error: Content is protected !!