Tuesday, May 21, 2024
Homeತಾಜಾ ಸುದ್ದಿನಟ ಆಮೀರ್ ಖಾನ್ ಮತ್ತು ಸಾರಾ ಖಾನ್ ಗೆ ವಿವೋ ಮೊಬೈಲ್ ಕಂಪನಿಯಿಂದ ಬಿಗ್ ಶಾಕ್

ನಟ ಆಮೀರ್ ಖಾನ್ ಮತ್ತು ಸಾರಾ ಖಾನ್ ಗೆ ವಿವೋ ಮೊಬೈಲ್ ಕಂಪನಿಯಿಂದ ಬಿಗ್ ಶಾಕ್

spot_img
- Advertisement -
- Advertisement -

ಗಡಿ ಕದನದ ಹಿನ್ನೆಲೆಯಲ್ಲಿ ಇಂಡಿಯಾ ಮತ್ತು ಚೀನಾ ನಡುವೆ ಶೀತಲ ಸಮರ ನಡೆಯುತ್ತಿದೆ. ಪ್ರತಿಯಾಗಿ ಈಗಾಗಲೇ ಚೀನಾದ 50ಕ್ಕೂ ಅಧಿಕ ಆ್ಯಪ್ ​ಗಳನ್ನು ಭಾರತದಲ್ಲಿ ಬ್ಯಾನ್​ ಮಾಡಲಾಗಿದೆ. ಅದೇ ರೀತಿ ಚೀನಾ ಉತ್ಪನ್ನಗಳನ್ನೂ ಬ್ಯಾನ್​ ಮಾಡುವಂತೆ ಸೋಷಿಯಲ್​ ಮೀಡಿಯಾದಲ್ಲಿ ಅಭಿಯಾನಗಳು ಶುರುವಾಗಿವೆ. ಇ ನಡುವೆ, ಒಂದಷ್ಟೂ ವ್ಯಾವಹಾರಿಕ ಒಕ್ಕೂಟಗಳು ಸಾಮೂಹಿಕವಾಗಿ ಚೀನಾ ವಸ್ತುಗಳ ಮಾರಾಟವನ್ನು ನಿಲ್ಲಿಸಿವೆ. ಇದೀಗ ಚೀನಾದ ವಿವೋ ಮೊಬೈಲ್​ ಕಂಪನಿ ಹೊಸದೊಂದು ನಿರ್ಧಾರ ತೆಗೆದುಕೊಂಡಿದೆ.

ಗಡಿಕದನ ತೀವ್ರಗೊಂಡ ಬೆನ್ನಲ್ಲೇ ಬಾಲಿವುಡ್​ನ ಕಲಾವಿದರು ಚೀನಾ ಉತ್ಪನ್ನಗಳ ರಾಯಭಾರಿಯನ್ನು ಕೈ ಬಿಡುವಂತೆ ಆಗ್ರಹಿಸಲಾಗಿತ್ತು. ಒಂದಷ್ಟು ಸೆಲೆಬ್ರಿಟಿಗಳು ಮುಂದೆ ಬಂದು ಬ್ರಾಂಡ್​ ಅಂಬಾಸಿಡರ್​ನಿಂದ ಆಚೆ ಬಂದಿದ್ದರು. ಹೀಗಿರುವಾಗಲೇ ಚೀನಾದ ವಿವೋ ಮೊಬೈಲ್​ ಸಂಸ್ಥೆಯೇ ಇದೀಗ ಭಾರತದ ಬ್ರಾಂಡ್​ ರಾಯಭಾರಿಗಳಾದ ಆಮೀರ್​ ಖಾನ್​ ಮತ್ತು ಸಾರಾ ಅಲಿ ಖಾನ್​ ಅವರನ್ನು ಕೈಬಿಟ್ಟಿದೆ.

ಹಾಗಂತ ಅವರನ್ನು ಶಾಶ್ವತವಾಗಿ ಕೈಬಿಟ್ಟಿಲ್ಲ. ಬದಲಿಗೆ ಒಂದಷ್ಟು ತಿಂಗಳುಗಳ ಕಾಲ ಅವರನ್ನು ದೂರ ಇಟ್ಟಿದೆ. ಇದಕ್ಕೆ ಕಾರಣ ಐಪಿಎಲ್​. ಹೌದು, ಇನ್ನು ಕೆಲ ದಿನಗಳಲ್ಲಿ ಐಪಿಎಲ್​ ಪಂದ್ಯಾವಳಿ ನಡೆಯಲಿದ್ದು, ಆ ವೇಳೆ ಹೊಸ ಬ್ರಾಂಡ್​ ಫೋನ್​ಗಳನ್ನು ವಿವೋ ಬಿಡುಗಡೆ ಮಾಡಲಿದೆ. ಐಪಿಎಲ್​ನಲ್ಲಿ ವಿವೋ ಟೈಟಲ್​ ಪ್ರಾಯೋಜಕತ್ವ ಹೊಂದಿದೆ. ಅಲ್ಲಿಯವರೆಗೂ ಅವರು ಬೇರೆ ಯಾವ ಫೋನ್​ ಪ್ರಚಾರ ಮಾಡುವುದಿಲ್ಲ ಎಂದು ವಿವೋ ತಿಳಿಸಿದೆ.

- Advertisement -
spot_img

Latest News

error: Content is protected !!