Friday, June 5, 2026
Homeಕರಾವಳಿಕೊರೋನಾ ರಣಕೇಕೆಯ ನಡುವೆಯೂ ವಿಟ್ಲದಲ್ಲಿ ಅಂಗಡಿ ಬಾಗಿಲು ಮುಚ್ಚಿ ಬಟ್ಟೆ ವ್ಯಾಪಾರ: ವಿಡಿಯೋ ವೈರಲ್

ಕೊರೋನಾ ರಣಕೇಕೆಯ ನಡುವೆಯೂ ವಿಟ್ಲದಲ್ಲಿ ಅಂಗಡಿ ಬಾಗಿಲು ಮುಚ್ಚಿ ಬಟ್ಟೆ ವ್ಯಾಪಾರ: ವಿಡಿಯೋ ವೈರಲ್

- Advertisement -
- Advertisement -

ವಿಟ್ಲ: ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಕಾರಣ ಹಾಗೂ ಸೋಂಕನ್ನು ನಿಯಂತ್ರಿಸುವ ಅನಿವಾರ್ಯತೆ ಇರುವುದರಿಂದ ಕಠಿಣ ಮಾರ್ಗಸೂಚಿಯನ್ನು ಸರ್ಕಾರ ಜಾರಿಗೊಳಿಸಿದೆ. ಆದರೆ ಈ ನಡುವೆಯೂ ಇಂದು ಬೆಳಿಗ್ಗೆ ವಿಟ್ಲ ಪೇಟೆಯಲ್ಲಿ ‘ಫಿಟ್ ಫ್ಯಾಷನ್’ ಎಂಬ ಬಟ್ಟೆ ಅಂಗಡಿಯಲ್ಲಿ ಶೆಟರ್ ಹಾಕಿ ಬಟ್ಟೆ ವ್ಯಾಪಾರ ನಡೆಸುತ್ತಿರುವ ಮಾಹಿತಿ ವಿಟ್ಲ ಪೊಲೀಸರು ದಾಳಿ ಮಾಡಿ, ಅಂಗಡಿ ಮುಚ್ಚಿಸಿದ ಘಟನೆ ನಡೆದಿದೆ.

ಮಹಿಳೆಯರು, ಪುರುಷರು ಅನೇಕ ಮಂದಿ ಭರದಿಂದ ಬಟ್ಟೆ ಖರೀದಿಸುತ್ತಿದ್ದರು. ಪೊಲೀಸರು ಅಂಗಡಿ ಮಾಲಕನಿಗೆ ಬಾಗಿಲು ತೆರೆಯಲು ಹೇಳಿ, ಎಲ್ಲರನ್ನೂ ಹೊರಗೆ ಕಳುಹಿಸಿದರು.

ಕೆಲದಿನಗಳ ಹಿಂದೆ ಈ ಘಟನೆ ಸಂಭವಿಸಿದ್ದು, ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ರವಿವಾರ ವೈರಲ್ ಆಗಿದೆ. ಮಾಲಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿದುಬಂದಿದೆ. ಇಂತಹ ಸಂದರ್ಭದಲ್ಲಿಯೂ ಈ ಘಟನೆ ನಡೆದ ಬಗ್ಗೆ ಸಾರ್ವಜನಿಕರ ತೀವ್ರ ಆಕ್ರೋಶ ವ್ಯಕ್ತವಾಗಿದೆ.

- Advertisement -

Latest News

error: Content is protected !!