Friday, June 27, 2025
Homeಕರಾವಳಿಮಂಗಳೂರುವಿಟ್ಲ; ಅಕ್ರಮವಾಗಿ ಜುಗಾರಿ ಆಡುವಾಗ ದಾಳಿ ಮಾಡಿದ್ರೂ, ಕಾನೂನು ಕ್ರಮ ಕೈಗೊಳ್ಳದ ಪಿ ಎಸ್ ಐ...

ವಿಟ್ಲ; ಅಕ್ರಮವಾಗಿ ಜುಗಾರಿ ಆಡುವಾಗ ದಾಳಿ ಮಾಡಿದ್ರೂ, ಕಾನೂನು ಕ್ರಮ ಕೈಗೊಳ್ಳದ ಪಿ ಎಸ್ ಐ ಸಸ್ಪೆಂಡ್

spot_img
- Advertisement -
- Advertisement -

ವಿಟ್ಲ; ದಿನಾಂಕ 08.05.2025 ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜುಗಾರಿ ಆಡುವ ಬಗ್ಗೆ ಮಾಹಿತಿ ದೊರೆತ ಮೇರೆಗೆ, ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಠಾಣೆ ಪಿ ಎಸ್ ಐ ಕೌಶಿಕ್ ಬಿ ಸಿ ದಾಳಿ ಮಾಡಿದ್ದರು. ಈ ವೇಳೆ  ಘಟನಾ ಸ್ಥಳದಲ್ಲಿ ಜುಗಾರಿ ಆಟದಲ್ಲಿ ತೊಡಗಿದ್ದವರು ಪತ್ತೆಯಾಗದಿದ್ದರು. ಅಲ್ಲದೇ ಸ್ಥಳದಲ್ಲಿ  ಬೈಕ್ ಪತ್ತೆಯಾಗಿತ್ತು. ಇಷ್ಟಿದ್ದರೂ ಪಿ ಎಸ್ ಐ ಕೌಶಿಕ್ ಬಿ ಸಿ ರವರು ಈ ಬಗ್ಗೆ ಕಾನೂನು ಕ್ರಮ ಜರುಗಿಸದೇ ಬೈಕ್ ಮಾಲೀಕನಿಗೆ ಕರೆಮಾಡಿ ಠಾಣೆಗೆ ಬರಮಾಡಿ ಕೊಂಡಿದ್ದರು. ಬಳಿಕ ಬೈಕ್‌ ಮಾಲಿಕನಿಗೆ ಮೂರನೇ ವ್ಯಕ್ತಿಯ ಮೂಲಕ  ಪ್ರಕರಣಕ್ಕೆ ಸಂಬಂಧಿಸಿದಂತೆ  ಹಣದ ಬೇಡಿಕೆಯಿಟ್ಟಿರುವ ಸಂಭಾಷಣೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಯ ಮೇಲೆ ದಿನಾಂಕ 12.05.2025 ರಂದು ಇಲಾಖಾ ಶಿಸ್ತು ಕ್ರಮ ಬಾಕಿಯಿರುವಂತೆ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

- Advertisement -
spot_img

Latest News

error: Content is protected !!