- Advertisement -
![]()
- Advertisement -
ವಿಟ್ಲ; 35 ಬಾರಿ ವಾರೆಂಟ್ ಜಾರಿಯಾಗಿದ್ದ ಆರೋಪಿಯನ್ನು ವಿಟ್ಲ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಬಂಟ್ವಾಳ ಪೆರುವಾಯಿ ನಿವಾಸಿ ಅಬ್ಬಾಸ್ ಜಿ ಬಂಧಿತ ಆರೋಪಿ. ಈತ ಕೋರ್ಟ್ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ಈತನನ್ನು ದಿನಾಂಕ 16/4/2026 ರಂದು ವಿದೇಶದಿಂದ ಹಿಂತಿರುಗುವಾಗ, ಇಮಿಗ್ರೇಶನ್ ವಿಭಾಗದ ಸಹಕಾರದಿಂದ, ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಟ್ಲ ಪೊಲೀಸ್ ಠಾಣಾ HC 2264 ಮೋಹನ, PC 2355 ವೆಂಕಪ್ಪ, PC 2463 ರವರುಗಳು ಬಂಧಿಸಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ
- Advertisement -


