Wednesday, June 3, 2026
Homeಕರಾವಳಿದೇವಸ್ಥಾನಗಳಲ್ಲಿ ವ್ಯಾಪಾರ ವಿವಾದ: ವಿ ಹೆಚ್ ಪಿ ಯಿಂದ ದ.ಕ. ಡಿಸಿ ಭೇಟಿ

ದೇವಸ್ಥಾನಗಳಲ್ಲಿ ವ್ಯಾಪಾರ ವಿವಾದ: ವಿ ಹೆಚ್ ಪಿ ಯಿಂದ ದ.ಕ. ಡಿಸಿ ಭೇಟಿ

- Advertisement -
- Advertisement -

ಮಂಗಳೂರು: ಕರಾವಳಿಯಲ್ಲಿ ಹಿಂದೂ ದೇವಸ್ಥಾನಗಳ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರಾಕರಣೆ ವಿಚಾರವಾಗಿ
ವಿಶ್ವ ಹಿಂದೂ ಪರಿಷತ್ ಜಿಲ್ಲಾಧಿಕಾರಿಯವರನ್ನು ಭೇಟಿ‌ ಮಾಡಿದೆ.

ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಭೇಟಿ ಮಾಡಿ ಇಡೀ ರಾಜ್ಯದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರಲು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವಿಹೆಚ್ ಪಿ ಮನವಿ ಮಾಡಿದೆ‌

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ ಪ್ರಕಾರ ಕಾನೂನು ತರಲು ಮನವಿ ಮಾಡಿದ್ದು, ಅಧಿಸೂಚಿತ ಸಂಖ್ಯೆ 31 ರ ಪ್ರಕಾರ ಕಾನೂನು ಜಾರಿಗೆ ಆಗ್ರಹ ಮಾಡಿದ್ದಾರೆ.

ಅಲ್ಲದೇ, ಜಾತ್ರೋತ್ಸವ, ರಥೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಿಂದೂಯೇತರಿಗೆ ಅವಕಾಶ ನೀಡದಂತೆ ಮತ್ತು
ದೇವಸ್ಥಾನಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಅನ್ಯ ಧರ್ಮಿಯರಿಗೆ ಟೆಂಡರ್ ಕೊಡಬಾರದು ಅಂತಾ ಕೂಡಾ ಮನವಿ ಸಲ್ಲಿಸಲಾಗಿದೆ.

- Advertisement -

Latest News

error: Content is protected !!