Sunday, May 5, 2024
Homeಕರಾವಳಿಉಡುಪಿಕೋವಿಶೀಲ್ಡ್ ವ್ಯಾಕ್ಸಿನ್‌ನಿಂದ ಪುರುಷತ್ವಕ್ಕೆ ಹಾನಿ ಇಲ್ಲ: ಮಣಿಪಾಲ ವೈದ್ಯರ ಸಂಶೋಧನೆ

ಕೋವಿಶೀಲ್ಡ್ ವ್ಯಾಕ್ಸಿನ್‌ನಿಂದ ಪುರುಷತ್ವಕ್ಕೆ ಹಾನಿ ಇಲ್ಲ: ಮಣಿಪಾಲ ವೈದ್ಯರ ಸಂಶೋಧನೆ

spot_img
- Advertisement -
- Advertisement -

ಮಣಿಪಾಲ: ಕೋವಿಡ್ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿದಾಗ, ಅನೇಕ ಸವಾಲುಗಳು ಎದುರಾಗಿದ್ದವು. ವ್ಯಾಕ್ಸಿನ್ ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಅನ್ನುವ ಭೀತಿ ಯೋಜನೆಯ ಹಿನ್ನಡೆಗೆ ಒಂದು ಕಾರಣವಾಗಿತ್ತು. ಇದೀಗ ಮಹತ್ವದ ಸಂಶೋಧನೆ ಎಂದು ಹೊರ ಬಿದ್ದಿದೆ

ಕೋವಿಶೀಲ್ಡ್ ವ್ಯಾಕ್ಸಿನ್‌ನಿಂದ ಪುರುಷರ ಫಲವತ್ತತೆಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ವೀರ್ಯದ ಗುಣಮಟ್ಟದಲ್ಲೂ ಯಾವುದೇ ಬದಲಾವಣೆ ಆಗುವುದಿಲ್ಲ ಎಂಬುದು ಮಣಿಪಾಲದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನಲ್ಲಿ ಭಾರತೀಯ ಫರ್ಟಿಲಿಟಿ ತಜ್ಞರ ತಂಡವೊಂದು ಈ ಕುರಿತು ಮೊದಲ ಬಾರಿ ನಡೆಸಿದ ಪೈಲಟ್ ಅಧ್ಯಯನದಲ್ಲಿ ಕಂಡುಕೊಂಡಿದೆ.

ಅಧ್ಯಯನಕ್ಕಾಗಿ ಆಯ್ಕೆ ಮಾಡಿದ 53 ಮಂದಿಯೂ ಎರಡು ಡೋಸ್ ವ್ಯಾಕ್ಸಿನ್‌ನ್ನು ಸ್ವೀಕರಿಸಿದ್ದಾರೆ. ಇವರಲ್ಲಿ ಅರ್ಧದಷ್ಟು ಮಂದಿಯ ವೀರ್ಯದ ಗುಣಮಟ್ಟ ಡಬ್ಲ್ಯುಎಚ್‌ಓ ನಿಗದಿ ಪಡಿಸಿದ ಮಟ್ಟಕ್ಕಿಂತ ಕೆಳಗಿದ್ದರೂ, ವ್ಯಾಕ್ಸಿನ್ ಪಡೆದ ನಂತರವೂ ಅದರಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ. ಮಣಿಪಾಲದ ಡಾ.(ಪ್ರೊ.) ಸತೀಶ್ ಅಡಿಗ ನೇತೃತ್ವದ ಐವರು ತಜ್ಞರ ತಂಡ ಈ ಅಧ್ಯಯನವನ್ನು ನಡೆಸಿದೆ.

- Advertisement -
spot_img

Latest News

error: Content is protected !!