Wednesday, June 24, 2026
Homeತಾಜಾ ಸುದ್ದಿಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಭೋಸ್ಲೆ ಮದುವೆ ವಿವಾದಕ್ಕೆ ಟ್ವಿಸ್ಟ್  ; ಮದ್ವೆಯಾದ ಒಂದೇ ತಿಂಗಳಿಗೆ...

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಭೋಸ್ಲೆ ಮದುವೆ ವಿವಾದಕ್ಕೆ ಟ್ವಿಸ್ಟ್  ; ಮದ್ವೆಯಾದ ಒಂದೇ ತಿಂಗಳಿಗೆ ಮೊನಾಲಿಸಾ ಗರ್ಭಿಣಿ ಎಂದ ಫರ್ಮಾನ್

- Advertisement -
- Advertisement -

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಭೋಸ್ಲೆ ಮದುವೆ ವಿವಾದಕ್ಕೆ ಟ್ವಿಸ್ಟ್ ಸಿಕ್ಕಿದೆ.  ಮದ್ವೆಯಾದ ಒಂದೇ ತಿಂಗಳಿಗೆ ಮೊನಾಲಿಸಾ ಗರ್ಭಿಣಿ ಎಂದು ಫರ್ಮಾನ್ ಖಾನೆ ಪೊಲೀಸರಿಗೆ ತಿಳಿಸಿದ್ದಾನೆ.

ಮೊನಾಲಿಸಾ ಹಾಗೂ ಫರ್ಮಾನ್ ಖಾನ್ 2026ರ ಮಾರ್ಚ್ 11ರಂದು ಕೇರಳದ ಪೂವಾರ್‌ನ ಅರುಮಾನೂರ್ ನೈನಾರ್ ದೇಗುಲದಲ್ಲಿ ಮದುವೆಯಾಗಿದ್ದರು. ಆಗ ಆಕೆ ಅಪ್ರಾಪ್ತೆ, ಇದು ಲವ್ ಜಿಹಾದ್ ಹೀಗೆ ಹಲವು ವಿಚಾರಗಳು ಚರ್ಚೆಯಾಗಿದ್ದವು. ಇದನ್ನೇ ಆಧಾರವಾಗಿಟ್ಟುಕೊಂಡು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಕೇರಳ ಮತ್ತು ಮಧ್ಯಪ್ರದೇಶದಲ್ಲಿ ವಿಸ್ತಾರವಾದ ತನಿಖೆ ಆರಂಭಿಸಿತ್ತು. ಬಳಿಕ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪೊಲೀಸ್ ಠಾಣೆಯಲ್ಲಿ ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಪೋಕ್ಸೋ ಪ್ರಕರಣ ಸಂಬಂಧ ಸದ್ಯ ತನಿಖೆ ನಡೆಯುತ್ತಿದ್ದು, ಹೇಳಿಕೆ ದಾಖಲಿಸಲು ಪೊಲೀಸರ ಮುಂದೆ ಮೊನಾಲಿಸಾ ಹಾಜರಾಗುವ ನಿರೀಕ್ಷೆಯಿದೆ. ಆದರೆ ಗರ್ಭಿಣಿಯಾಗಿರುವ ಕಾರಣ ಪ್ರಯಾಣಿಸಲು ಅಥವಾ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಫರ್ಮಾನ್ ಖಾನ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸದ್ಯ ಪೊಲೀಸರು ಈ ಸಂಬಂಧ ವೈದ್ಯಕೀಯ ದೃಢೀಕರಣ ಪಡೆಯುವ ಸಾಧ್ಯತೆಯಿದೆ. ಕೇರಳ ಹೈಕೋರ್ಟ್ ದಂಪತಿಗೆ ಮಧ್ಯಂತರ ತಡೆ ನೀಡಿದ್ದು, ಮೇ.20ರವರೆಗೆ ಫರ್ಮಾನ್ ಖಾನ್ ಬಂಧನಕ್ಕೆ ತಡೆ ನೀಡಿದೆ.

- Advertisement -

Latest News

error: Content is protected !!