Friday, June 27, 2025
Homeಕರಾವಳಿರಾಷ್ಟ್ರೀಯ ಹೆದ್ದಾರಿಗೇ ಬೇಲಿ ಹಾಕಿದ ಗ್ರಾಮಸ್ಥರು!

ರಾಷ್ಟ್ರೀಯ ಹೆದ್ದಾರಿಗೇ ಬೇಲಿ ಹಾಕಿದ ಗ್ರಾಮಸ್ಥರು!

spot_img
- Advertisement -
- Advertisement -

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗೆ ಗ್ರಾಮಸ್ಥರು ಬೇಲಿ ಹಾಕಿದ ಬಂಟ್ವಾಳ ತಾಲೂಕಿನ ನಾವೂರದಲ್ಲಿ ನಡೆದಿದೆ.‌ ಇದರಿಂದಾಗಿ ಬಿ.ಸಿ. ರೋಡ್-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ರಸ್ತೆ ಅಗಲೀಕರಣಕ್ಕಾಗಿ ಹೆದ್ದಾರಿ ಪ್ರಾಧಿಕಾರ ಇಲಾಖೆ ನಾವೂರ ಗ್ರಾಮದ ಸುಮಾರು 32ಕ್ಕೂ ಹೆಚ್ಚು ಜನರ ಭೂಮಿ ಸ್ವಾಧೀನ ಮಾಡಿಕೊಂಡಿತ್ತು ಎನ್ನಲಾಗಿದೆ. ಬಿ.ಸಿ. ರೋಡ್-ಪೂಂಜಾಲಕಟ್ಟೆ ಮಾರ್ಗದ ಸುಮಾರು 19 ಕಿಮೀ ರಸ್ತೆ ಅಗಲೀಕರಣಕ್ಕಾಗಿ ಸುಮಾರು 200 ಎಕರೆಗಿಂತಲೂ ಜಾಸ್ತಿ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಭೂ ಸ್ವಾಧೀನ ಮಾಡಿ ಪರಿಹಾರ ನೀಡದೇ ಹೆದ್ದಾರಿ ಪ್ರಾಧಿಕಾರ ಇಲಾಖೆ ಮೂರು ವರ್ಷಗಳಿಂದ ಸತಾಯಿಸುತ್ತಿದೆ ಎಂದು ಗ್ರಾಮಸ್ಥರು ಸಿಟ್ಟಿಗೆದ್ದು ರಸ್ತೆಗೆ ಬೇಲಿ ಹಾಕಿದ್ದಾರೆ.‌

- Advertisement -
spot_img

Latest News

error: Content is protected !!