Tuesday, June 18, 2024
Homeತಾಜಾ ಸುದ್ದಿನವೆಂಬರ್ 23 ರಿಂದ ದಕ್ಷಿಣ ಕನ್ನಡ ವಿಕಸಿತ ಭಾರತ ಸಂಕಲ್ಪ ಯಾತ್ರೆ

ನವೆಂಬರ್ 23 ರಿಂದ ದಕ್ಷಿಣ ಕನ್ನಡ ವಿಕಸಿತ ಭಾರತ ಸಂಕಲ್ಪ ಯಾತ್ರೆ

spot_img
- Advertisement -
- Advertisement -

ದೇಶದಾದ್ಯಂತ ಸನ್ಮಾನ್ಯ ಪ್ರಧಾನ ಮಂತ್ರಿಗಳು ಘೋಷಿಸಿರುವ  ವಿಕಸಿತ ಭಾರತ ಸಂಕಲ್ಪ ಯಾತ್ರೆ  ನಡೆಯಲ್ಲಿದ್ದು ಈ ಕಾರ್ಯಕ್ರಮದ ಮುಖೇನ ಕೇಂದ್ರ ಸರ್ಕಾರದ ಜಾರಿ ಮಾಡಿರುವ ಜನಪರ ಕಲ್ಯಾಣ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ಫಲಾನುಭವಿಗಳಿಗೆ ತಲುಪಿಸುವುದು ಈ ಆಂದೋಲನದ ಪ್ರಮುಖ ಉದ್ದೇಶವಾಗಿದ್ದು .

ಅಭಿಯಾನವನ್ನು ವ್ಯವಸ್ಥಿತವಾಗಿ ಕಾರ್ಯಗತಗೊಳಿಸಲು, ಮಾರ್ಗದರ್ಶಿ ಅಧಿಕಾರಿಗಳು, ಬ್ಯಾಂಕ್ಗಳು , ವಿವಿಧ  ಜಿಲ್ಲಾ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್‌ಗಳ ಸಕ್ರಿಯ ಭಾಗವಹಿಸುವಿಕೆಗೆ ಈ ಪೂರ್ವಬಾವಿ ಸಭೆ ಕೆನರಾ ಬ್ಯಾಂಕ್ ವೃತ್ತ ಕಛೇರಿ ಮಂಗಳೂರು ಇಲ್ಲಿನ ಸಭಾಂಗಣದಲ್ಲಿ ಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಈ ಅಭಿಯಾನದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರಿ ಅಧಿಕಾರಿಗಳಾದ  ಶ್ರೀ. ಸಿದ್ದರಾಮಪ್ಪ  ಚಲ್ಕಪುರ್ ಐ .ಎಫ್.ಎಸ್  ನಿರ್ದೇಶಕರು ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಭಾರತ ಸರ್ಕಾರ ಇವರು ಭಾಗವಹಿಸಿ , ಅಗತ್ಯ ಹಣಕಾಸು ಸೇವೆಗಳು,ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಜನರಿಗೆ ತಲುಪುವುದು ಮತ್ತು ಜಾಗೃತಿ ಮೂಡಿಸುವುದು ,ಅಭಿಯಾನ ಯಶಸ್ವಿಯಾಗಿ ನಡೆಸಲು ಪೂರ್ವ ತಯಾರಿ, ಯೋಜನೆಗಳ ಫಲಾನುಭವಿಗಳಿಂದ ಅನುಭವ ಹಂಚಿಕೆ, ಪ್ರಗತಿಪರ ರೈತರೊಂದಿಗೆ ಸಂವಾದ , ಅಭಿಯಾನದ ಪ್ರಮುಖ ಆಶಯಗಳ ಬಗ್ಗೆ ತಿಳಿಸಿದರು . ಶ್ರೀ.ಪ್ರವೀಣ್ ಎಂ.ಪಿ  ಸಹಾಯಕ ಮಹಾ ಪ್ರಬಂಧಕರು ಕೆನರಾ ಬ್ಯಾಂಕ್ ಬೆಂಗಳೂರು  ಇವರು ಭಾಗವಹಿಸಿ ಈ ಅಭಿಯಾನದ ವಿವಿಧ ಕಾರ್ಯಕ್ರಮಗಳನ್ನ ವಿವರಿಸಿದರು.ಸಭೆಯಲ್ಲಿ  ಶ್ರೀಮತಿ ಕವಿತಾ ಎನ್ ಶೆಟ್ಟಿ  ಲೀಡ್ ಬ್ಯಾಂಕ್ ಚೀಫ್ ಮ್ಯಾನೇಜರ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವೆಂಬರ್ 23, 2023 ರಿಂದ ಜನವರಿ 26 ರಿಂದ 2024ರ ವರೆಗೆ ಜರುಗುವ ಅಭಿಯಾನದ ಜವಾಬ್ದಾರಿಗಳನ್ನು ವಿವರಿಸಿದರು, ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ವಿವಿಧ ಬ್ಯಾಂಕ್ಗಳ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!