Sunday, June 7, 2026
Homeತಾಜಾ ಸುದ್ದಿನಾಲ್ಕನೇ ಬಾರಿಗೆ ದರ್ಶನ್ ಭೇಟಿಗೆ ಮೈದುನ ದಿನಕರ್ ತೂಗುದೀಪ್ ಜೊತೆ ಬಂದ ವಿಜಯಲಕ್ಷ್ಮೀ ದರ್ಶನ್

ನಾಲ್ಕನೇ ಬಾರಿಗೆ ದರ್ಶನ್ ಭೇಟಿಗೆ ಮೈದುನ ದಿನಕರ್ ತೂಗುದೀಪ್ ಜೊತೆ ಬಂದ ವಿಜಯಲಕ್ಷ್ಮೀ ದರ್ಶನ್

- Advertisement -
- Advertisement -

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಭೇಟಿಗಾಗಿ ನಾಲ್ಕನೇ ಬಾರಿಗೆ ಜೈಲಿಗೆ ಆಗಮಿಸಿದ್ದಾರೆ ಡಿ ಬಾಸ್ ಪತ್ನಿ ವಿಜಯಲಕ್ಷ್ಮೀ ದರ್ಶನ್. ಮೈದುನ ದಿನಕರ್ ತೂಗುದೀಪ್ ಜೊತೆ ಜೈಲಿಗೆ ಭೇಟಿ ನೀಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟ ದರ್ಶನ ಸೇರಿ 17 ಆರೋಪಿಗಳಿಗೆ ಜುಲೈ 18ರ ವರೆಗೆ ನ್ಯಾಯಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.ಜೈಲಿನಲ್ಲಿ ಊಟ ಸೇರದೆ ದರ್ಶನ್ ಅವರು ದಿನದಿಂದ ದಿನಕ್ಕೆ ತಮ್ಮ ತೂಕವನ್ನು ಕಳೆದುಕೊಳ್ಳುತ್ತಿದ್ದಾರೆ.ಅಲ್ಲದೇ ಅವರ ಆರೋಗ್ಯದಲ್ಲೂ ಏರುಪೇರಾಗುತ್ತಿದೆ.

ಇನ್ನು ಕಳೆದ ವಾರವಷ್ಟೇ ಪುತ್ರನೊಂದಿಗೆ ವಿಜಯಲಕ್ಷ್ಮೀ ದರ್ಶನ್ ದರ್ಶನ್ ಭೇಟಿಗಾಗಿ ಬಂದಿದ್ದರು. ಇದೀಗ ಮತ್ತೆ ಭೇಟಿ ಕೊಟ್ಟಿದ್ದಾರೆ.

- Advertisement -

Latest News

error: Content is protected !!