Thursday, May 16, 2024
Homeಕರಾವಳಿವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆಯ ವಿರುದ್ಧ ಅವಿಶ್ವಾಸ: ಸಹಾಯಕ ಕಮಿಷನರ್ ಗೆ ದೂರು

ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆಯ ವಿರುದ್ಧ ಅವಿಶ್ವಾಸ: ಸಹಾಯಕ ಕಮಿಷನರ್ ಗೆ ದೂರು

spot_img
- Advertisement -
- Advertisement -

ವೇಣೂರು: ಗ್ರಾಮ ಪಂಚಾಯತಿನ‌ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಹಾಗೂ ಭ್ರಷ್ಟಾಚಾರದ ಆರೋಪವನ್ನೂ ಎದುರಿಸುತ್ತಿರುವ ಬಿಜೆಪಿ ಬೆಂಬಲಿತ ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ವಿ. ಶೆಟ್ಟರ ವಿರುದ್ಧ ಈಗ ಪಂಚಾಯತ್ ನ ಎಲ್ಲ ಸದಸ್ಯರು ಬಂಡಾಯ ಎದ್ದಿದ್ದಾರೆ

ಗ್ರಾಮ‌ ಪಂಚಾಯತಿನ ಎಲ್ಲ 23ಮಂದಿ ಸದಸ್ಯರು ಒಗ್ಗಟ್ಟಾಗಿ ಪಕ್ಷಭೇದ ಮರೆತು ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿಯವರ ವಿರುದ್ಧ ಅವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಪುತ್ತೂರಿನ ಸಹಾಯಕ ಕಮಿಷನರರಿಗೆ ಲಿಖಿತವಾಗಿ ಸಲ್ಲಿಸಿದ ಅವಿಶ್ವಾಸ ಮಂಡನಾ ಪತ್ರದಲ್ಲಿ ತಮಗೆ ಯಾರಿಗೂ ನಮ್ಮ ಗ್ರಾಮ ಪಂಚಾಯತಿನ ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿಯವರ ಮೇಲೆ ವಿಶ್ವಾಸ ಇಲ್ಲದ್ದರಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅರುಣ್ ಕ್ರಾಸ್ತಾ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕ ಅನೂಪ್ ಜೆ. ಪಾಯ್ಸ್ ನೇತೃತ್ವದಲ್ಲಿ ಪುತ್ತೂರಿನ ಸಹಾಯಕ ಕಮಿಷನರನ್ನು ಭೇಟಿಯಾದ ತಂಡದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಲೋಕಯ್ಯ ಪೂಜಾರಿ, ಸತೀಶ್ ಹೆಗ್ಡೆ, ವಿಕ್ಟರ್ ಮಿನೇಜಸ್, ರಾಜೇಶ್ ಪೂಜಾರಿ ಮೂಡುಕೋಡಿ, ಯಶೋಧರ ಹೆಗ್ಡೆ, ಅಣ್ಣು, ಲಕ್ಷ್ಮಣ ಪೂಜಾರಿ, ಹರೀಶ್ ಪಿ. ಎಸ್. ಇದ್ದರು.

- Advertisement -
spot_img

Latest News

error: Content is protected !!