ಮಂಗಳೂರು: 2022-23ನೇ ಸಾಲಿಗೆ ಸಾರ್ವತ್ರಿಕ ವರ್ಗಾವಣೆ ಅಡಿಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೂಪ್ -ಸಿ ವೃಂದದ ವಾರ್ಡರ್ ಗಳನ್ನು ವರ್ಗಾವಣೆ ಮಾಡಲಾಗಿದೆ.
ಉಡುಪಿ ಕಾರಾಗೃಹದ ವಾರ್ಡರ್ ಸ್ವಾತಿ ಎನ್.ಪಿ. ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಮಂಗಳೂರು ಕಾರಾಗೃಹದ ವಾರ್ಡರ್ ಅಕ್ಷಯ ಸಿ. ಮದ್ದರಕಿ ಅವರನ್ನು ಸುರಪುರಕ್ಕೆ ವರ್ಗಾಯಿಸಲಾಗಿದೆ. ಬೆಂಗಳೂರು ಕಾರಾಗೃಹದಿಂದ ಪ್ರಕಾಶ್ ಪಾಟೀಲ್ ಮತ್ತು ಕಲ್ಬುರ್ಗಿ ಕಾರಾಗೃಹದಿಂದ ಪರಸಪ್ಪ ಮಾದರ ಅವರನ್ನು ಮಂಗಳೂರಿಗೆ ವರ್ಗಾಯಿಸಲಾಗಿದೆ.
ಉಡುಪಿ ಕಾರಾಗೃಹದ ವಾರ್ಡರ್ ಶಿವಮೊಗ್ಗದಲ್ಲಿ ಓಓಡಿ ಮೇಲೆ ಕರ್ತವ್ಯದಲ್ಲಿದ್ದ ರಾಜು ಪರಿಟ ಅವರನ್ನು ವಿಜಯಪುರಕ್ಕೆ ವರ್ಗಾಯಿಸಲಾಗಿದೆ.
ಮಂಗಳೂರು ಕಾರಾಗೃಹದ ವಾರ್ಡರ್ ಶೃಂಗಾರ್ ಜಿ.ವಿ. ಅವರನ್ನು ಧಾರವಾಡಕ್ಕೆ, ಪಂಕಜ ಕುರ್ಲಪೆ ಅವರನ್ನು ಹಾವೇರಿಗೆ, ಸುರೇಶ್ ಮಾಲು ಕರಜಗಿ ಅವರನ್ನು ಬೆಳಗಾವಿಗೆ ಮತ್ತು ಉಡುಪಿ ಕಾರಾಗೃಹದ ವಿನಾಯಕ ಎಂ.ಆರ್. ಅವರನ್ನು ಚಿಕ್ಕಮಗಳೂರಿಗೆ ವರ್ಗಾಯಿಸಲಾಗಿದೆ. ಸಾರ್ವತ್ರಿಕ ವರ್ಗಾವಣೆ ಅಡಿಯಲ್ಲಿ ಒಟ್ಟು 85 ವಾರ್ಡರ್ ಗಳನ್ನು ವರ್ಗಾವಣೆ ಮಾಡಿ ಕಾರಾಗೃಹ ಇಲಾಖೆ ಡಿಜಿಪಿ ಡಾ. ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ.