Wednesday, June 3, 2026
Homeಕರಾವಳಿಪುತ್ತೂರು; ಮದುವೆ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ವ್ಯಾನ್ ಪಲ್ಟಿ

ಪುತ್ತೂರು; ಮದುವೆ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ವ್ಯಾನ್ ಪಲ್ಟಿ

- Advertisement -
- Advertisement -

ಪುತ್ತೂರು; ಮದುವೆ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ವ್ಯಾನ್ ಪಲ್ಟಿಯಾಗಿ ಹಲವರು ಗಾಯಗೊಂಡ ಘಟನೆ ಕೊಳ್ತಿಗೆ ಗ್ರಾಮದ ಪಾಲ್ತಾಡು ಸಮೀಪದ ಮಣಿಕ್ಕರದಲ್ಲಿ ನಡೆದಿದೆ.

ಪಾಲ್ತಾಡು ಸಮೀಪದ ಆಲಂತಡ್ಕದಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ಈಶ್ವರಮಂಗಲಕ್ಕೆ ಹೊರಟಿದ್ದ ವ್ಯಾನ್‌ ಪಾಲ್ತಾಡು ಮಣಿಕ್ಕರದಲ್ಲಿ ಪಲ್ಟಿಯಾಗಿದೆ.ವ್ಯಾನಿನಲ್ಲಿ 19 ಜನ ಪ್ರಯಾಣಿಸುತ್ತಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಅವರೆಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಸ್ತೆಯ ಮಧ್ಯೆ ವ್ಯಾನ್‌ ಅಡ್ಡಲಾಗಿ ಬಿದ್ದ ಪರಿಣಾಮ ಬೆಳ್ಳಾರೆ-ಪುತ್ತೂರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.ಸ್ಥಳಕ್ಕೆ ಬೆಳ್ಳಾರೆ ಠಾಣಾ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!