ಬೆಳ್ತಂಗಡಿ : ಸರಕಾರಿ ದಾಖಲೆಗಳನ್ನು ದುರುಪಯೋಗ ಮಾಡಿದ ಪ್ರಕರಣ ಸಂಬಂಧ ಗ್ರಾಮಲೆಕ್ಕಿಗ ಹಾಗೂ ಬ್ರೋಕರ್ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ತಹಶೀಲ್ದಾರ್ ಪೃಥ್ವಿ ಸಾನಿಕಂ ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಪೊಲೀಸರು ಸೆಪ್ಟೆಂಬರ್ 7 ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಶೆಟ್ಟಿಹಳ್ಳಿಯ ಸಿ.ಎ ಕೆರೆ ಮನೆಯಿಂದ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ್ದು ಇಂದು (ಶುಕ್ರವಾರ) ಬೆಳ್ತಂಗಡಿ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು ಕೋರ್ಟ್ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಇನ್ನೂ ಮಂಗಳೂರು ಸೆಕ್ಷನ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಬೇಕಾಗಿದೆ.

ಇನ್ನೂ ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ.ಕೆ.ವಿ ಯವರು ಸರಕಾರಿ ದಾಖಲೆ ದುರುಪಯೋಗ ಪ್ರಕರಣ ಸಂಬಂಧ ಬಂಧನವಾಗಿರುವ ಗ್ರಾಮಲೆಕ್ಕಿಗ ಜಯಚಂದ್ರನ ಬಗ್ಗೆ ಮಾಹಿತಿ ಪಡೆದು ಬೆಳ್ತಂಗಡಿ ಹೋಬಳಿ ತೆಕ್ಕಾರು, ಬಾರ್ಯ, ಪುತ್ತಿಲ ಮತ್ತು ಕರಾಯ, ತಣ್ಣಿರುಪಂಥ ಗ್ರಾಮದ ಗ್ರಾಮಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಯಚಂದ್ರನನ್ನು ಕರ್ತವ್ಯ ಲೋಪ ಎಸಗಿದರಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.