Monday, May 13, 2024
Homeಕರಾವಳಿಬೆಳ್ತಂಗಡಿ : ಸರಕಾರದ ದಾಖಲೆಗಳ ದುರುಪಯೋಗ ಪ್ರಕರಣ; ಗ್ರಾಮಲೆಕ್ಕಿಗ ಜಯಚಂದ್ರ ಬಂಧನ, ಬ್ರೋಕರ್ ಪಿ.ಎನ್ ರಾಜು...

ಬೆಳ್ತಂಗಡಿ : ಸರಕಾರದ ದಾಖಲೆಗಳ ದುರುಪಯೋಗ ಪ್ರಕರಣ; ಗ್ರಾಮಲೆಕ್ಕಿಗ ಜಯಚಂದ್ರ ಬಂಧನ, ಬ್ರೋಕರ್ ಪಿ.ಎನ್ ರಾಜು ಪರಾರಿ: ಫೈಲ್ ದುರುಪಯೋಗದ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

spot_img
- Advertisement -
- Advertisement -

ಬೆಳ್ತಂಗಡಿ : ಸರಕಾರದ ಕೆಲಸ ದೇವರ ಕೆಲಸ ಎಂದು ಕೆಲವು ಅಧಿಕಾರಿಗಳು ನಂಬಿದ್ರೆ ಇನ್ನೂ ಕೆಲವರು ಸರಕಾರದ ಕೆಲಸ ತಮ್ಮ ಕಿಸೆ ತುಂಬಿಸುವ ಕೆಲಸ ಎಂಬಂತೆ ಬೆಳ್ತಂಗಡಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದ  ಒಂದು ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನಲ್ಲಿ 2018 ರಿಂದ 2022 ರವರ ಅವಧಿಯಲ್ಲಿ ಅಕ್ರಮ ಸಕ್ರಮ ಎನ್.ಸಿ.ಆರ್ ಫೈಲ್ ನ್ನು ಸರಕಾರಿ ಅಧಿಕಾರಿ ಬ್ರೋಕರ್ ವಶಕ್ಕೆ ನೀಡಿ ಕಿಸೆ ತುಂಬಿಸಲು ಆರಂಭಿಸಿದ್ದ. ಆದ್ರೆ ಇಬ್ಬರ ಟೈಮ್ ಸರಿಯಾಗಿರಲ್ಲಿಲ್ಲ. ಇಬ್ಬರು ಕೂಡ ರೆಡ್ ಹ್ಯಾಂಡ್ ಅಗಿ ಬೆಳ್ತಂಗಡಿ  ಕಚೇರಿಯಲ್ಲಿ ದಕ್ಷ ಅಧಿಕಾರಿ ತಹಶೀಲ್ದಾರ್ ಕೈಗೆ ಸಿಕ್ಕಿಬಿದ್ದರು. ನಂತರ ನಡೆದದ್ದು ಮಾತ್ರ ಕಾನೂನು ಕುಣಿಕೆ ದಾರಿ.

ಘಟನೆ ವಿವರ :  ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ 01/01/2018 ರಿಂದ 16/08/2022 ರ ಅವಧಿಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹೋಬಳಿಯ ಅಕ್ರಮ ಸಕ್ರಮದ ಎನ್.ಸಿ.ಆರ್ ಫೈಲ್ ಗಳ ಕೇಸ್ ವರ್ಕರ್ ಅಗಿದ್ದ ಜಯಚಂದ್ರ ಎಂಬಾತ ಶಿಬಾಜೆಯ ಬ್ರೋಕರ್ ಪಿ.ಎನ್.ರಾಜು ಎಂಬಾತನ ಜೊತೆ ಸೇರಿ ಹಣ ಮಾಡುವ ಉದ್ದೇಶದಿಂದ ಸರಕಾರಿ ಕರ್ತವ್ಯವನ್ನು ಸರಿಯಾಗಿ ಮಾಡದೆ ಫೈಲ್ ಗಳನ್ನು ಬ್ರೋಕರ್ ಕೈಗೆ ನೀಡಿ ಬಚ್ಚಿಟ್ಟು ನಂತರ‌ ಬ್ರೋಕರ್ ಬೆಳ್ತಂಗಡಿ ತಾಲೂಕು ಕಚೇರಿಗೆ ನೀಡಿದ್ದಾನೆ‌. ಈ ವಿಚಾರ ತಿಳಿದ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅಂತರಿಕ ತನಿಖೆ ನಡೆಸಿದಾಗ ಇಬ್ಬರು ಸೇರಿ ಸರಕಾರಕ್ಕೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ. ತಕ್ಷಣ ಪುತ್ತೂರು ಎ.ಸಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದು ಅವರ ಅದೇಶದಂತೆ 17/08/2022 ರಂದು ಬೆಳ್ತಂಗಡಿ ತಹಶೀಲ್ದಾರ್ ರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇಂದು (ಬುಧವಾರ) ಮೊದಲ ಆರೋಪಿ ಬೆಳ್ತಂಗಡಿ ಹೋಬಳಿ ಪುತ್ತಿಲ, ಬಾರ್ಯ, ತಣ್ಣಿರುಪಂಥ ಗ್ರಾಮದ ಗ್ರಾಮಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಯಚಂದ್ರ ಎಂಬಾತನನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿರುವ ತನ್ನ ಮನೆಯಿಂದ ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಸಂಜೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ‌. ಎರಡನೇ ಆರೋಪಿ ಬ್ರೋಕರ್ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪಡಂತಾಜೆ ನಿವಾಸಿ ಪಿ.ಎನ್‌.ರಾಜು ಕಳೆದ ನಾಲ್ಕು ದಿನದಿಂದ ಮೊಬೈಲ್ ಸ್ವೀಚ್ ಆಫ್ ಪರಾರಿಯಾಗಿದ್ದು ಆತನ ಪತ್ತೆಗೆ ಬೆಳ್ತಂಗಡಿ ಪೊಲೀಸರು ಬಲೆ ಬಿಸಿದ್ದಾರೆ‌‌‌.

ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ನೀಡಿದ ದೂರಿನ ಸಾರಾಂಶ : ಬೆಳ್ತಂಗಡಿ ತಾಲೂಕು ಕಛೇರಿಯಲ್ಲಿ 2018 ನೇ ಇಸವಿಯ ಕೊಕ್ಕಡ  ಹೋಬಳಿಯ ಎನ್.ಸಿ.ಆರ್ ಪೈಲ್ ಗಳ ಕೇಸ್ ವರ್ಕರ್ ಆಗಿದ್ದ 1ನೇ ಆರೋಪಿ ಜಯಚಂದ್ರ ಎಂಬಾತನು 2ನೇ ಆರೋಪಿಯಾದ ಪಿ.ಎನ್‌.ರಾಜು ಎಂಬಾತನೊಂದಿಗೆ ಸೇರಿ ಅಕ್ರಮ ಲಾಭಗಳಿಸುವ ಉದ್ದೇಶದಿಂದ 1ನೇ ಆರೋಪಿತನಿಗೆ ನೇಮಿಸಿದ ಸರ್ಕಾರಿ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ತಾಲೂಕು ಕಛೇರಿಗೆ ಸಾರ್ವಜನಿಕರಿಂದ ಬಂದ ಎನ್.ಸಿ.ಆರ್ ಪೈಲ್ ಗಳನ್ನು 2ನೇ ಆರೋಪಿತನ ವಶಕ್ಕೆ ನೀಡಿ 2ನೇ ಆರೋಪಿತನು ಈ ಪೈಲ್ ಗಳನ್ನು ಅಪ್ರಮಾಣಿಕವಾಗಿ ತನ್ನ ವಶದಲ್ಲಿ ಬಚ್ಚಿಟಿದ್ದನ್ನು 2ನೇ ಆರೋಪಿತನು  ತಾಲೂಕು ಕಛೇರಿಗೆ ನೀಡಿದ್ದು ಇಬ್ಬರು ಆರೋಪಿಗಳು ವಂಚನೆ ಹಾಗೂ ನಂಬಿಕೆ ದ್ರೋಹ  ಎಸಗಿರುವ  ಬಗ್ಗೆ ದಿನಾಂಕ 16-08-2022 ರಂದು ತಹಶೀಲ್ದಾರರ ನಡವಳಿಯಂತೆ ದಿನಾಂಕ 17-08-2022 ರಂದು  ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಗ್ರಾಮಲೆಕ್ಕಿಗ ಜಯಚಂದ್ರ ಅಸಲಿ ಮುಖ : ಜಯಚಂದ್ರ ಕಡಬ ,ಸುಳ್ಯ ಕರ್ತವ್ಯ ಮಾಡಿ ಕಳೆದ 8 ವರ್ಷಗಳಿಂದ ಬೆಳ್ತಂಗಡಿಯಲ್ಲಿ ಕರ್ತವ್ಯ ಮಾಡುತ್ತಿದ್ದಾನೆ. ಈತನ ಬಗ್ಗೆ ಯಾರಿಗೂ ಒಳ್ಳೆಯ ಅಭಿಪ್ರಾಯವಿಲ್ಲ ,ಯಾವ ಅಧಿಕಾರಿಗೂ ಇವನನ್ನು ಕಂಡ್ರೆ ಆಗುವುದಿಲ್ಲ. 2013 ರಲ್ಲಿ ಕಡಬದಲ್ಲಿರುವಾಗ ಯಾವುದೋ ವಿಚಾರದಲ್ಲಿ ಚಂದ್ರಚಂದ್ರನ ಮೇಲೆ ತನ್ನ ಸ್ನೇಹಿತನೊಬ್ಬ ಲೈಸೆನ್ಸ್ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದ ಆದ್ರೆ ಗುಂಡು ಗುರಿ ತಪ್ಪಿ ಗೋಡೆಗೆ ಬಿದ್ದಿದ್ದರಿಂದ ಬದುಕಿ ಬಂದಿದ್ದ‌. ಬೊಲೆರೋ ವಾಹನದಲ್ಲಿ ತಿರುಗಾಡುತ್ತಾ ಸರಕಾರದ ಕೆಲಸವನ್ನು ಬ್ರೋಕರ್ ಗಳ ಜೊತೆ ಸೇರಿ ಹಣ ಮಾಡುತ್ತಿದ್ದವನ್ನು ಇದೀಗ ಜೈಲು ಸೇರಿ ಮುದ್ದೆ ತಿನ್ನುವಂತಾಗಿದೆ.

- Advertisement -
spot_img

Latest News

error: Content is protected !!