Wednesday, June 3, 2026
Homeತಾಜಾ ಸುದ್ದಿ24 ಕ್ಯಾರೆಟ್ ಚಿನ್ನ ಲೇಪಿತ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಊರ್ವಶಿ ರೌಟೇಲಾ

24 ಕ್ಯಾರೆಟ್ ಚಿನ್ನ ಲೇಪಿತ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಊರ್ವಶಿ ರೌಟೇಲಾ

- Advertisement -
- Advertisement -

ಮುಂಬೈ: ನಟಿ ಊರ್ವಶಿ ರೌಟೇಲಾ ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ರಾಪರ್ ಯೋ ಯೋ ಹನಿ ಸಿಂಗ್‌ ಅವರ ಜೊತೆಗೆ ಆಚರಿಸಿದ್ದಾರೆ.

ರಾಪರ್ ಯೋ ಯೋ ಹನಿ ಸಿಂಗ್‌ ಅವರು ಊರ್ವಶಿ ಅವರಿಗೆ 24 ಕ್ಯಾರೆಟ್ ಚಿನ್ನ ಲೇಪಿತ ಕೇಕ್ ಅನ್ನು ಉಡುಗೊರೆಯಾಗಿ ನೀಡಿದ್ದು, ಅದನ್ನು ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ.

ಇನ್ನು ಊವರ್ಶಿ ಅವರು ಹುಟ್ಟುಹಬ್ಬ ಆಚರಿಸಿಕೊಂಡ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೊದಲ್ಲಿ, ಹನಿ ಸಿಂಗ್ ಅವರು ಪಕ್ಕದಲ್ಲಿ ನಿಂತಿದ್ದು, ಊರ್ವಶಿ ಕೇಕ್ ಕತ್ತರಿಸಿದ್ದಾರೆ. ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿ ಸದ್ದು ಮಾಡುತ್ತಿದೆ.

- Advertisement -

Latest News

error: Content is protected !!