Saturday, May 18, 2024
Homeಕರಾವಳಿರಸ್ತೆ ದಾಟುತ್ತಿದ್ದ ಪಾದಚಾರಿಗೆ ಬೈಕ್ ಢಿಕ್ಕಿ; ಬೈಕ್ ಸವಾರ ಹಾಗೂ ಪಾದಚಾರಿಗೆ ಗಾಯ

ರಸ್ತೆ ದಾಟುತ್ತಿದ್ದ ಪಾದಚಾರಿಗೆ ಬೈಕ್ ಢಿಕ್ಕಿ; ಬೈಕ್ ಸವಾರ ಹಾಗೂ ಪಾದಚಾರಿಗೆ ಗಾಯ

spot_img
- Advertisement -
- Advertisement -

ಉಪ್ಪಿನಂಗಡಿ: ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹಾಗೂ ಪಾದಚಾರಿ ಗಾಯಗೊಂಡ ಘಟನೆ ಉಪ್ಪಿನಂಗಡಿಯ ಪುಳಿತ್ತಡಿ ಸಮೀಪ ಗುರ್ಜಿ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.ಗುರ್ಜಿ ನಿವಾಸಿ ದಿನೇಶ್ ಶೆಟ್ಟಿ ಗಾಯಗೊಂಡ ಪಾದಾಚಾರಿ. ಬೈಕ್ ಸವಾರನ ಮಾಹಿತಿ ಲಭ್ಯವಾಗಿಲ್ಲ.

ಉಪ್ಪಿನಂಗಡಿಯಿಂದ ಅಟೋ ರಿಕ್ಷಾದಲ್ಲಿ ಬಂದ ದಿನೇಶ್ ಅವರು ಹಳೆಗೇಟು- ಮರ್ಧಾಳ ರಾಜ್ಯ ಹೆದ್ದಾರಿಯಲ್ಲಿರು ಗುರ್ಜಿಯ ತನ್ನ ಮನೆ ಬಳಿ ಇಳಿದಿದ್ದಾರೆ. ಬಳಿಕ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದರು. ಈ ಸಂದರ್ಭ ಪೆರಿಯಡ್ಕ ಕಡೆಯಿಂದ ಪುಳಿತ್ತಡಿ ಕಡೆಗೆ ಹೋಗುತ್ತಿದ್ದ ಬೈಕ್ ಇವರಿಗೆ ಢಿಕ್ಕಿಯಾಗಿ, ಮಗುಚಿ ಬಿದ್ದಿದೆ. ಈ ಸಂದರ್ಭ ಬೈಕ್ ಸವಾರನೂ ರಸ್ತೆಗೆಸೆಯಲ್ಪಟ್ಟಿದ್ದು, ಪಾದಾಚಾರಿ ಹಾಗೂ ಬೈಕ್ ಸವಾರನಿಗೂ ಗಾಯಗಳಾಗಿವೆ.ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!