Tuesday, July 8, 2025
Homeಕರಾವಳಿಮಂಗಳೂರುಬೆಳ್ತಂಗಡಿ : ಕಿಲ್ಲೂರಿನಲ್ಲಿ ಮೇಯಲು ಬಿಟ್ಟಿದ್ದ ದನಕ್ಕೆ ವಿಷವಿಕ್ಕಿ ಸಾಯಿಸಿದ ಪಾಪಿಗಳು

ಬೆಳ್ತಂಗಡಿ : ಕಿಲ್ಲೂರಿನಲ್ಲಿ ಮೇಯಲು ಬಿಟ್ಟಿದ್ದ ದನಕ್ಕೆ ವಿಷವಿಕ್ಕಿ ಸಾಯಿಸಿದ ಪಾಪಿಗಳು

spot_img
- Advertisement -
- Advertisement -

 ಬೆಳ್ತಂಗಡಿ : ಮೇಯಲು ಬಿಟ್ಟಿದ್ದ ದನಕ್ಕೆ ವಿಷವಿಕ್ಕಿ ಪಾಪಿಗಳು ಸಾಯಿಸಿದ ಘಟನೆ ಕಿಲ್ಲೂರಿನಲ್ಲಿ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಜುಲೈ 8 ರಂದು ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಕಿಲ್ಲೂರು ಕೋಯನಗರ ಎಂಬಲ್ಲಿ ಜುಲೈ 7 ರಂದು ಸಂಜೆ ಘಟನೆ ನಡೆಸಿದೆ ಇಲ್ಲಿನ ನಿವಾಸಿ ಇಸುಬು ಎಂಬವರಿಗೆ ಸೇರಿದ ದನವನ್ನು ಸೋಮವಾರ ಎಂದಿನಂತೆ ಮೇಯಲು ಬಿಟ್ಟಿದ್ದರು. ಸಂಜೆಯ ವೇಳೆ ದನ ಸಾವನ್ನಪಿರುವುದು ಕಂಡು ಬಂದಿದೆ. ನೋಡಿದಾಗ ಇದು ವಿಷ ಪ್ರಾಶನದಿಂದ ಸಾವನ್ನಪ್ಪಿರುವಂತೆ ಕಂಡು ಬಂದಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ದನದ ಕಳೆಬರಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು. ಇದರ ವರದಿ ಬಂದ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ.

- Advertisement -
spot_img

Latest News

error: Content is protected !!